ಅಥಣಿ: ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ವಿಶ್ವದ ಅತಿದೊಡ್ಡ ವಿಮಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ದೇಶದ ಅಭಿವೃದ್ಧಿಗೆ ಬೆನ್ನಲುಬಾಗಿದೆ ಎಂದು ಬೆಳಗಾವಿ ವಿಭಾಗೀಯ ಶಾಖಾ ಪ್ರಬಂಧಕ ಡಿ.ಟಿ.ರವಿ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಅಥಣಿ-ರಾಯಬಾಗ ಎಲ್‌ಐಸಿ ಶಾಖೆಯ ಪ್ರತಿನಿಧಿಗಳ ಅಭ್ಯುದಯ ಸಂಘದ ವಾರ್ಷಿಕ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಲ್‌ಐಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ ಎಂದರು.
ಉಪನ್ಯಾಸಕ ಸುಧೀಂದ್ರ ಅಡಿಗ ಮಾತನಾಡಿ, ವಿಮಾ ಸಂಸ್ಥೆಯಲ್ಲಿ ದುಡಿಯುವ ಪ್ರತಿನಿಧಿಗಳ ಸೇವೆ ಸ್ಮರಣೀಯ ಎಂದರು.
ಹಿರಿಯ ಪ್ರತಿನಿಧಿಗಳಾದ ಅರವಿಂದರಾವ್ ದೇಶಪಾಂಡೆ, ಪ್ರಭಾಕರ ಚವ್ಹಾಣ, ಸುನೀಲ ಮೇತ್ರಿ ಮಾತನಾಡಿದರು. ಶಾಖಾಧಿಕಾರಿ ವಾದಿರಾಜ ಕುಲಕರ್ಣಿ, ಮಲ್ಲಿಕಾರ್ಜುನ ನಿವಲಗುಂದ, ಅಭಿವೃದ್ದಿ ಅಧಿಕಾರಿ ಎ.ಜಿ.ಹೂಗಾರ, ಪ್ರಶಾಂತ ಪಟ್ಟಣಶೆಟ್ಟಿ, ನಾಗರಾಜ ದಾಸರ, ಪ್ರತಿನಿಧಿಗಳಾದ ಚಂದು ಪಾಟೀಲ, ಎ.ಎಸ್.ಜಮಾದಾರ್, ರಾಜು ಬಿಸಗುಪ್ಪಿ, ಎ.ಬಿ.ಬಿರಾದಾರ, ಸುನೀಲ ಮೇತ್ರಿ, ರಾಜು ವಾಘಮೊಡೆ, ಕೆಂಪಿ ಪಾಟೀಲ, ಎಂ.ಕೆ.ಕಾಡಪಗೊಳ, ಶ್ರೀಶೈಲ ಬಡಕಂಬಿ, ಪಿ.ಎನ್.ಚವ್ಹಾಣ ಇತರರಿದ್ದರು.