ಜಿಲ್ಲೆ

ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ

ಬಾಬುರಾವ ಯಡ್ರಾಮಿ

ಯಾದಗಿರಿ : 2025ರ ಮಾರ್ಚ್ 13 ರಿಂದ 14ರ ವರೆಗೆ ಹೋಳಿಹಬ್ಬ ಆಚರಣೆಯ ಹಿನ್ನೆಲೆ 2025ರ ಮಾರ್ಚ್ 13ರ ಗುರುವಾರ ರಂದು ಬೆಳಿಗ್ಗೆ 6 ಗಂಟೆಯಿ0ದ 2025ರ ಮಾರ್ಚ್ 15ರ ಶನಿವಾರ ರಂದು ಬೆಳಿಗ್ಗೆ 6 ಗಂಟೆಯ ವರೆಗೆ ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧಾಜ್ಞೆಯನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಯಾದಗಿರಿ ಜಿಲ್ಲೆಯಾದ್ಯಂತ 2025ರ ಮಾರ್ಚ್ 13ರ ಗುರುವಾರ ರಂದು ಬೆಳಿಗ್ಗೆ 6 ಗಂಟೆಯಿAದ 2025ರ ಮಾರ್ಚ್ 15ರ ಶನಿವಾರ ರಂದು ಬೆಳಿಗ್ಗೆ 6 ಗಂಟೆಯ ವರೆಗೆ ಎಲ್ಲಾ ವೈನ್‌ಶಾಪ್, ಬಾರ್‌ಗಳು ಸಗಟು ಮತ್ತು ಚೀಲರೆ ಮಧ್ಯ ಮಾರಾಟ ನಿಷೇಧಿಸಿ ಆದೇಶಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ