ಜಿಲ್ಲೆ

ಮದ್ಯಪಾನ, ಮದ್ಯಮಾರಾಟ ನಿಷೇಧ ಜಾರಿಗೊಳಿಸಿ DC ಆದೇಶ

ಬಾಬುರಾವ ಯಡ್ರಾಮಿ

ಯಾದಗಿರಿ : ಜಿಲ್ಲೆಯ ಯಾದಗಿರಿ, ಶಹಾಪೂರ, ಸುರಪುರ, ಹಾಗೂ ಹುಣಸಗಿ ತಾಲೂಕುಗಳ ಕೆಲವು ಗ್ರಾಮ ಪಂಚಾಯತಗಳ ಉಪ ಚುನಾವಣೆಯು ಜರುಗಲಿರುವ ಪ್ರಯುಕ್ತ 2024ರ ನವೆಂಬರ್ 21 ರಿಂದ ಸಂಜೆ 5 ಗಂಟೆಯಿAದ 2024ರ ನವೆಂಬರ್ 23ರ ಶನಿವಾರ ರಂದು ಸಂಜೆ 5 ಗಂಟೆಯ ವರೆಗೆ ಮದ್ಯಪಾನ ಹಾಗೂ ಮದ್ಯಮಾರಾಟ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೊರಡಿಸಿದ್ದಾರೆ.

ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಗಳಲ್ಲಿ ಸದಸ್ಯ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಈ ಗ್ರಾಮ ಪಂಚಾಯತಿ ವ್ಯಾಪ್ತಿಗೆ ವಿಧಿಸಲಾಗಿದ್ದ ಮದ್ಯ ನಿಷೇಧ ಆದೇಶವನ್ನು ರದ್ದುಪಡಿಸಿ ಈ ಕೆಳಗಿನ ತೋರಿಸಿದ ಸ್ಥಾನಗಳಲ್ಲಿ ಉಪ ಚುನಾವಣೆ ನಿಮಿತ್ಯ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಠಿಯಿಂದ ಮದ್ಯಪಾನ ಮತ್ತು ಮದ್ಯಮಾರಾಟ ನಿಷೇಧಿಸುವುದು ಅವಶ್ಯಕವೆಂದು ಕಂಡು ಬಂದ ಪ್ರಯುಕ್ತ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಕರ್ನಾಟಕ ಅಬಕಾರಿ ಕಾಯ್ದೆ 1967ರ ಕಲಂ 10 (ಬಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, 2024ರ ನವೆಂಬರ್ 21ರ ಗುರುವಾರ ರಂದು ಸಂಜೆ 5 ಗಂಟೆಯಿAದ 2024ರ ನವೆಂಬರ್ 23ರ ಶನಿವಾರ ರಂದು ಸಂಜೆ 5 ಗಂಟೆಯ ವರೆಗೆ ಗ್ರಾಮ ಪಂಚಾಯತಗಳ ಉಪ ಚುನಾವಣೆ ನಿಮಿತ್ಯ ಗ್ರಾಮ ಪಂಚಾಯತಗಳ ಕ್ಷೇತ್ರ ವ್ಯಾಪ್ತಿಗಳೊಂದಿಗೆ ಗ್ರಾಮವೂ ಸೇರಿದಂತೆ, ಎಲ್ಲಾ ವೈನ್‌ಶಾಪ್, ಬಾರ್‌ಗಳು, ದಾಬಾಗಳು, ಹಾಗೂ ಹೆದ್ದಾರಿಯ ದಾಬಾಗಳಲ್ಲಿ ಯಾವುದೇ ರೀತಿಯ ಮದ್ಯವನ್ನು ಮಾರಾಟ ಮತ್ತು ಸೇವನೆಯನ್ನು ನಿರ್ಬಂಧಿಸಿದೆ ಹಾಗೂ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನಿಷೇಧಿಸಿ ಪರಿಷ್ಕೃತ ಆದೇಶ ಹೊರಡಿಸಿದೆ.

ಯಾದಗಿರಿ ತಾಲೂಕಿನ 7 ಬಂದಳ್ಳಿ ಗ್ರಾಮ ಪಂಚಾಯತದಲ್ಲಿ ಚುನಾವಣೆ ಕ್ಷೇತ್ರದ 5 ಯಡ್ಡಳ್ಳಿ, ಶಹಾಪೂರ ತಾಲೂಕಿನ 11 ಕನ್ಯಾಕೋಳ್ಳೂರು ಗ್ರಾಮ ಪಂಚಾಯತದಲ್ಲಿ ಚುನಾವಣೆ ಕ್ಷೇತ್ರದ 1 ಕನ್ಯಾಕೋಳ್ಳೂರು, ಸುರಪುರ ತಾಲೂಕಿನ 6 ದೇವಾಪೂರ ಗ್ರಾಮ ಪಂಚಾಯತದಲ್ಲಿ ಚುನಾವಣೆ ಕ್ಷೇತ್ರದ 2 ದೇವಾಪೂರ, ಹುಣಸಗಿ ತಾಲೂಕಿನ 5 ರಾಜನಕೋಳ್ಳುರ ಗ್ರಾಮ ಪಂಚಾಯತದಲ್ಲಿ ಚುನಾವಣೆ ಕ್ಷೇತ್ರದ 5 ರಾಜಕೋಳ್ಳುರ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೂಚನೆಗಳು ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚಬೇಕು, ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟೆçÃಟರಿಗೆ ಒಪ್ಪಿಸಬೇಕು. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡುಬAದರೆ ಮುನ್ನೆಚ್ಚೆರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವ ವರೆಗೆ ಅಂತವರನ್ನು ಕಸ್ಟಡಿಯಲ್ಲಿ ಇಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.