ಗಂಗಾವತಿ: ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ 21ನೇ ವಾರ್ಷಿಕೋತ್ಸವ ನಿಮಿತ್ತ ನಗರದ ಎಲ್‌ಐಸಿ ಕಚೇರಿ ಆವರಣದಲ್ಲಿ ಸಂಘಟನೆ ಧ್ವಜಾರೋಹಣ ಶುಕ್ರವಾರ ನೆರವೇರಿಸಲಾಯಿತು.
ಇದನ್ನೂ ಓದಿ: ಜೀವ ವಿಮಾ ಪ್ರತಿನಿಧಿಗಳಿಂದ ಪ್ರತಿಭಟನೆ
ಸಿಐಟಿಯು ಜಿಲ್ಲಾಧ್ಯಕ್ಷ ಎಂ.ನಿರುಪಾದಿ ಬೆಣಕಲ್ ಮಾತನಾಡಿ, ಗ್ರಾಹಕರು ಮತ್ತು ಸಂಸ್ಥೆ ನಡುವಿನ ಸೇತುವೆಯಾಗಿರುವ ಪ್ರತಿನಿಧಿಗಳ ಸಂಘ, ಉತ್ತಮ ಸೇವೆಯೊಂದಿಗೆ ಸಂಸ್ಥೆ ಬೆಳೆಸುತ್ತಿದೆ. ಅಭಿವೃದ್ಧಿಯತ್ತ ಸಾಗುತ್ತಿರುವ ಎಲ್‌ಐಸಿಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದ್ದು, ವಿರೋಧಿಸಲು ಜನವರಿಯಲ್ಲಿ ದಿಲ್ಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಘದ ಸ್ಥಳೀಯ ಶಾಖೆ ವ್ಯವಸ್ಥಾಪಕ ಖಲೀಲ್ ಅಹ್ಮದ್, ಅಭಿವೃದ್ಧಿ ಅಧಿಕಾರಿಗಳಾದ ರಾಮಪ್ಪ ಕುರಿ, ಶ್ರೀನಿವಾಸ, ಕೆ.ಣಿರಾಜ್, ದಯಾಕರ್, ವೈಭವ, ಮುರಳಿ, ಪೂಜಿತಾ, ಲತಾ, ತಾಲೂಕಾಧ್ಯಕ್ಷ ಕೆ.ಎಂ.ಮಂಜುನಾಥ, ಪದಾಧಿಕಾರಿಗಳಾದ ಎಸ್.ಕೆ.ಹುಸೇನ್ ಬಾಷಾ, ತಬರೇಶ, ಕೆ.ನರೇಶ, ವಲೀಮೊಹಿಯುದ್ದೀನ್, ಬಸವರಾಜ ಸಜ್ಜನ, ಕೆ.ನಿಂಗಜ್ಜ, ಶ್ರೀನಿವಾಸ ಕುಲಕರ್ಣಿ ಇತರರಿದ್ದರು.