ಸಾಗರದಲ್ಲಿ ಎಲ್‌ಐಸಿ ಆಯೋಜಿಸಿದ್ದ 68ನೇ ವಿಮಾ ಸಪ್ತಾಹದಲ್ಲಿ ಶ್ರೀಧರ ಹೆಗಡೆ ಮಾತನಾಡಿದರು. ನಾರಾಯಣ ಹೆಗಡೆ, ಕವಿತಾ, ಶ್ರೀಕೃಷ್ಣ, ಎಂ.ಎಲ್.ಭಟ್ ಇತರರಿದ್ದರು.  
ಜಿಲ್ಲೆ

ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿ ಪಾತ್ರ ಹಿರಿದು

ಸಾಗರ: ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿ ಪಾತ್ರ ದೊಡ್ಡದು. ಎಲ್‌ಐಸಿ ದೇಶದ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ ಎಂದು ಎಲ್‌ಐಸಿ ಸಾಗರ ವಿಭಾಗದ ಶಾಖಾಧಿಕಾರಿ ಶ್ರೀಧರ ಹೆಗಡೆ ಹೇಳಿದರು.

ನಗರದ ಎಲ್‌ಐಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ 68ನೇ ವರ್ಷದ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಈ ಆರ್ಥಿಕ ಸಾಲಿನಲ್ಲಿ ಎಲ್‌ಐಸಿ ಮೂಲಕ ಕೇಂದ್ರ ಸರ್ಕಾರಕ್ಕೆ 31 ಸಾವಿರ ಕೋಟಿ ರೂ. ಡಿವಿಡೆಂಡ್ ನೀಡಲಾಗಿದೆ. ಕ್ಲೈಮ್ ಸೆಟ್ಲಮೆಂಟ್‌ನಲ್ಲಿ ಶೇ.99್ಟ ಪ್ರಗತಿ ಸಾಧಿಸಿದೆ. ಇತರ ಖಾಸಗಿ ಸಂಸ್ಥೆಗಳಿಗಿಂತ ಕೇಂದ್ರ ಸ್ವಾಮ್ಯದ ಎಲ್‌ಐಸಿ ಉನ್ನತ ಸ್ಥಾನದಲ್ಲಿದೆ ಎಂದರು.
ಪ್ರಸ್ತುತ ಸಂಸ್ಥೆಯಲ್ಲಿ 13 ಲಕ್ಷ ಜೀವವಿಮಾ ಪ್ರತಿನಿಧಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಷೇರುಪೇಟೆಯಲ್ಲಿ ಸಹ ಬಂಡವಾಳ ತೊಡಗಿಸಿ ಗ್ರಾಹಕರಿಗೆ ಅತಿ ಹೆಚ್ಚಿನ ಲಾಭಾಂಶ ನೀಡಲಾಗುತ್ತಿದೆ. 33 ಕೋಟಿ ಪಾಲಿಸಿದಾರರಿದ್ದಾರೆ. ಕಳೆದ ವರ್ಷ ಗೋಲ್ಡನ್ ಜ್ಯುಬಿಲಿ ೌಂಡೇಶನ್ ಅನುದಾನದಿಂದ ತಾಲೂಕಿನ ಯಡಜಿಗಳೆಮನೆ, ಹೆಗ್ಗೋಡು ವಿದ್ಯಾಭಿವೃದ್ಧಿ ಕಾಲೇಜಿಗೆ 40 ಲಕ್ಷ ರೂ. ಅನುದಾನ ನೀಡಿದೆ. ಈ ವರ್ಷ ಬಂದಗದ್ದೆಯ ಭಾರತಿ ಪ್ರೌಢಶಾಲೆಗೆ 25 ಲಕ್ಷ ರೂ. ಅನುದಾನ ನೀಡುವ ಮೂಲಕ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದೆ. ಸೆ.1ರಿಂದ 7ರವರೆಗೆ ವಿಮಾ ಸಪ್ತಾಹ ನಡೆಯಲಿದ್ದು ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ ಎಂದು ಹೇಳಿದರು.
ಸಹಾಯಕ ಶಾಖಾ ವ್ಯವಸ್ಥಾಪಕ ಶಂಕರನಾರಾಯಣ ಹೆಗಡೆ, ಕವಿತಾ, ಶ್ರೀಕೃಷ್ಣ, ಎಂ.ಎಲ್.ಭಟ್, ಪ್ರದೀಪ್, ನಿರಂಜನಮೂರ್ತಿ, ರಾಘವೇಂದ್ರ, ಅಜಯ್ ಪಿ. ಕಾನ್ಲೆ, ಟಿ.ಸುಧಾ ಇತರರಿದ್ದರು.