ಅರಸೀಕೆರೆ: ಭಾರತೀಯ ಜೀವ ವಿಮಾ ನಿಗಮ ಗ್ರಾಹಕ ಸ್ನೇಹಿಯಾಗಿದೆ ಎಂದು ಶಾಖಾ ಪ್ರಬಂಧಕ ಆರ್ ಚರಣ್ ಹೇಳಿದರು.
ನಗರದ ಎಲ್‌ಐಸಿ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 69ನೇ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಳಿತಾಯ, ಸುರಕ್ಷತೆ ಬಯಸಿ ಬರುವ ಗ್ರಾಹಕರ ಪಾಲಿಗೆ ಜೀವ ವಿಮಾ ನಿಗಮ ಸಂಜೀವಿನಿಯಾಗಿದ್ದು, ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಮರುಪಾವತಿ ಮತ್ತು ಜೀವನದ ಭದ್ರತೆ ಆಧಾರದಿಂದಲೇ ಭಾರತೀಯ ಜೀವ ವಿಮಾ ನಿಗಮ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ. ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಶಾಖೆಯ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ಪ್ರತಿನಿಧಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀವ ವಿಮಾ ನಿಗಮದ ಬ್ಯಾನರ್ ಹಿಡಿದು ಸಾರ್ವಜನಿಕರಿಗೆ ಪರಿಚಯಿಸಿದರು. ಶಾಖೆಗೆ ವಿಮಾ ಕಂತು ಕಟ್ಟಿದ ಪ್ರಥಮ ಗ್ರಾಹಕ ಜ್ಞಾನೇಶ್ ಅವರನ್ನು ಗೌರವಿಸಲಾಯಿತು. ರಾಮಚಂದ್ರ, ನರೇಂದ್ರ, ಬೆಂಡೇಕೆರೆ ನಾಗರಾಜ್, ಸತೀಶ್ ಸೇರಿದಂತೆ ಹಲವರು ಹಾಜರಿದ್ದರು.