ಹುಬ್ಬಳ್ಳಿ : ನಗರದ ಐಇಎಂಎಸ್ ಎಂಬಿಎ ಮಹಾವಿದ್ಯಾಲಯದಲ್ಲಿ ಶನಿವಾರದಂದು ರಾಷ್ಟ್ರೀಯ ಗ್ರಂಥಾಲಯ ದಿನ ಆಚರಿಸಲಾಯಿತು.
ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಮಾತನಾಡಿ, ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸಲು ಆನ್ಲೈನ್ ಉಪಸ್ಥಿತಿಯೊಂದಿಗೆ ಶಿಕ್ಷಣವನ್ನು ಹೆಚ್ಚು ಡಿಜಿಟಲೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.
ಓದುವಿಕೆಯನ್ನು ನಿಯಮಿತ ಚಟುವಟಿಕೆಯಾಗಿ ಅಭ್ಯಾಸ ಮಾಡಬೇಕು. ಓದು ವ್ಯಕ್ತಿಗೆ ಸಂತೋಷವನ್ನು ತರುವ ಏಕೈಕ ಚಟುವಟಿಕೆಯಾಗಿದೆ ಎಂದು ಹೇಳಿದರು.
ಒಳ್ಳೆಯ ಪುಸ್ತಕಗಳನ್ನು ಓದುವುದು ಅಥವಾ ಒಳ್ಳೆಯ ವಿಷಯವನ್ನು ಕೇಳುವುದು ಹೃದಯವನ್ನು ಮೆದುಳಿಗೆ ಸಂರ್ಪಸುತ್ತದೆ. ಓದುವ ಮೂಲಕ ಪಡೆಯುವ ಜ್ಞಾನಕ್ಕೆ ಪರ್ಯುಯವಿಲ್ಲ ಎಂದು ತಿಳಿಸಿದರು.
ಮುಖ್ಯ ಗ್ರಂಥಪಾಲಕ ಮಂಜುನಾಥ, ಗ್ರಂಥಾಲಯ ದಿನಾಚರಣೆಯ ಮಹತ್ವ ಮತ್ತು ಗ್ರಂಥಾಲಯ ವಿಜ್ಞಾನಕ್ಕೆ ಡಾ.ಎಸ್.ಆರ್.ರಂಗನಾಥನ್ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು .
ಇದೇ ಸಂದರ್ಭದಲ್ಲಿ ಪ್ರಬಂಧ ರಚನೆ, ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆಗಳಂತಹ ವಿವಿಧ ಚಟುವಟಿಕೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.