ಜಿಲ್ಲೆ

ಗ್ರಂಥಾಲಯ ಕಟ್ಟಡಕ್ಕೆ ಭೂಮಿಪೂಜೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್ ನಲ್ಲಿ ಗ್ರಂಥಾಲಯ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮ ಭಾನುವಾರ ನಡೆಯಿತು.

ಶಾಸಕ ಮಹೇಶ ಟೆಂಗಿನಕಾಯಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 35 ಲಕ್ಷ ರೂ. ವೆಚ್ಚದಲ್ಲಿ ಸುಂದರ ಗ್ರಂಥಾಲಯ ಕಟ್ಟಡದ ನಿರ್ಮಾಣವಾಗಲಿದೆ. ಈಗಾಗಲೇ ತಮ್ಮ ಅನುದಾನದಲ್ಲಿ 8 ಲಕ್ಷ ರೂ. ನೀಡಲಾಗಿದೆ. ಉಳಿದ ಅನುದಾನವನ್ನು ಸಂಸದರ ಮತ್ತು ವಿಧಾನ ಪರಿಷತ್ತಿನ ಸದಸ್ಯರ ಅನುದಾನದಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು.

ಶಿರೂರ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಮಹೇಶ ಹೊರಕೇರಿ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಪದಾಧಿಕಾರಿಗಳಾದ ಎಸ್.ಎಸ್. ಹುಡೇದ, ಬಸವರಾಜ ಅಂಗಡಿ, ಶೈಲೇಶ ಹೊನ್ನಳ್ಳಿ, ಪ್ರಭು ಪಾಟೀಲ, ಎನ್.ಎಸ್. ಯತ್ನಳ್ಳಿ, ಎಸ್.ಬಿ. ಬೆಳ್ಳೆರಿಮಠ, ವಿಜಯಾ ಗುಡಗೇರಿ, ಜಿ.ಕೆ. ಹೆಗಡೆ, ಸೊಪ್ಪಿಮಠ, ರಮೇಶಬಾಬು, ಸುಭಾಸ ಹಂಗರಕಿ, ಪ್ರಭಾ ರಮೇಶ ಬಾಬು, ಗುತ್ತಿಗೆದಾರ ಶಿವರಾಜ ಬಿಸನಳ್ಳಿ ಇತರರು ಉಪಸ್ಥಿತರಿದ್ದರು.