ಸರಗೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕ ದಿನ ಆಚರಿಸಲಾಯಿತು. ಮಹದೇವಸ್ವಾಮಿ, ಬಿಡುಗಲು ಶಿವಣ್ಣ, ಸೋಮು, ಮಧು ಇತರರು ಇದ್ದರು. 
ಜಿಲ್ಲೆ

ಸರಗೂರಿನಲ್ಲಿ ಗ್ರಂಥಪಾಲಕರ ದಿನಾಚರಣೆ

ನಾಗೇಶ ಎಸ್

ಸರಗೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜ್ಞಾನ ಸಂಪಾದಿಸಿದ್ದು ಗ್ರಂಥಾಲಯದಲ್ಲಿ. ವಿವಿಧ ದೇಶಗಳ ಗ್ರಂಥಾಯಗಳಲ್ಲಿ ಅಧ್ಯಯನ ಮಾಡಿ, ಶ್ರೇಷ್ಠ ಸಂವಿಧಾನ ರಚಿಸಿ ವಿಶ್ವ ಮಾನವ ಎನಿಸಿಕೊಂಡಿದ್ದಾರೆ ಎಂದು ತಾಲೂಕು ಪಂಚಾಯಿತಿ ಸಂಯೋಜಕ ಅಧಿಕಾರಿ ಮಹದೇವಸ್ವಾಮಿ ಹೇಳಿದರು.

ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಂಥಾಲಯ ಪಿತಾಮಹಾ ಡಾ.ಎಸ್.ಆರ್.ರಂಗನಾಥನ್ ಜನ್ಮ ದಿನದ ಅಂಗವಾಗಿ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡತನದಲ್ಲಿ ಇರುವ ಅನೇಕ ವಿದ್ಯಾರ್ಥಿಗಳ ಗ್ರಂಥಾಲಯದಲ್ಲಿ ಓದಿ ಉನ್ನತ ಉದ್ಯೋಗದಲ್ಲಿ ಇದ್ದಾರೆ. ಈ ಸ್ವರ್ಧಾತ್ಮಕ ಯುಗದಲ್ಲಿ ಎಲ್ಲ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳನ್ನು ಓದಿ, ಜ್ಞಾನ ಸಂಪಾದನೆ ಮಾಡಿ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಸಂಯೋಜಕ ಅಧಿಕಾರಿ ಮಹದೇವಸ್ವಾಮಿ ಅವನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಂಥಪಾಲಕ ಬಿಡುಗಲು ಶಿವಣ್ಣ, ಸಹಾಯಕಿ ವರ್ಷಾ, ಸೋಮು, ಮಧು, ಎಸ್.ಜಿ.ಶ್ರೀಕಾಂತ್, ಚಿನ್ಮಯಿ, ವಿನೋದ್, ಪ್ರಕಾಶ್, ವಿಕಾಸ್, ಚೆನ್ನ ನಾಯಕ ಇತರರು ಹಾಜರಿದ್ದರು.