??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಜ್ಞಾನಾರ್ಜನೆ ಕೇಂದ್ರ ಗ್ರಂಥಾಲಯ

ರಮೇಶ ಮೇಳಕುಂದಾ

ಭಾಲ್ಕಿ: ಗ್ರಂಥಾಲಯ ಜ್ಞಾನ ದೇಗುಲ. ಜ್ಞಾನಾರ್ಜನೆಗಾಗಿ ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಹೇಳಿದರು.
ನಗರ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಂಥಾಲಯ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕದಲ್ಲಿನ ಶಬ್ದಕೋಶ, ಜ್ಞಾನ ಭಂಡಾರ ಮನಸ್ಸು ಪ್ರಫುಲ್ಲಗೊಳಿಸುತ್ತದೆ. ಪುಸ್ತಕ ಹೊಂದಿರುವ ವ್ಯಕ್ತಿಗೆ ಬೇಸರ ಇರುವುದಿಲ್ಲ. ಪ್ರತಿಯೊಬ್ಬರೂ ಪುಸ್ತಕ ಓದಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೊಬೈಲ್ ಗೀಳಿನಿಂದ ಪುಸ್ತಕ ಮತ್ತು ಪತ್ರಿಕೆ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮುದ್ರಣ ವ್ಯವಸ್ಥೆಯಲ್ಲಿ ಶಕ್ತಿ ಅಡಗಿದೆ. ಪುಸ್ತಕ ಮತ್ತು ಮುದ್ರಿತ ಪತ್ರಿಕೆ ಓದುವುದರಿಂದ ಮನಸ್ಸು ಅರಳುತ್ತದೆ. ಜ್ಞಾನ ಭಂಡಾರ ತುಂಬಿಕೊಳ್ಳುತ್ತದೆ ಎಂದರು.
ನಿವೃತ್ತ ಗ್ರಂಥಪಾಲಕ ಶಿವಶರಣಪ್ಪ ಛತ್ರೆ ಮಾತನಾಡಿ, ಪಟ್ಟಣದಲ್ಲಿ ಅತ್ಯುತ್ತಮ ಗ್ರಂಥಾಲಯವಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು. ಗ್ರಂಥಪಾಲಕ ನಿಂಗಣ್ಣ ಗಚ್ಚಿನಮನಿ ಮಾತನಾಡಿ, ಪುಸ್ತಕದಲ್ಲಿ ಅದ್ಭುತ ನಿಧಿ ಅಡಗಿದೆ. ಅದನ್ನು ಓದುಗರು ಅರಗಿಸಿಕೊಂಡರೆ ಯಾರಿಂದಲೂ ಕಳ್ಳತನ ಮಾಡಲು ಆಗುವುದಿಲ್ಲ. ಪುಸ್ತಕದ ಗೆಳೆತನ ಮಾಡಿದರೆ ಮುಂದೊAದು ದಿನ ಜಗತ್ತೇ ನಿಮ್ಮ ಸ್ನೇಹಕ್ಕೆ ಕೈ ಚಾಚುತ್ತದೆ ಎಂದರು.
ನಿವೃತ್ತ ಪಿಎಸ್‌ಐ ವಿಶ್ವನಾಥ ಬಳಕಟ್ಟೆ, ಚಂದ್ರಕಾAತ ತಳವಾಡೆ, ಗಣೇಶ ವಾಡೆ, ಜಗನ್ನಾಥ, ಶ್ರೀನಾಥ ಬಿರಾದಾರ, ಜ್ಯೋತಿಕಿರಣ ಕಲ್ಯಾಣೆ, ದೀಪಕ ಥಮಕೆ, ಪವನ ಕಲವಾಡಿ ಇತರರಿದ್ದರು. ನಿಂಗಣ್ಣ ಸ್ವಾಗತಿಸಿದರು. ಚಂದ್ರಕಾಂತ ನಿರೂಪಣೆ ಮಾಡಿದರು. ಪವನ ವಂದಿಸಿದರು.