ಜಿಲ್ಲೆ

ಉರವಕೊಂಡ ಶ್ರೀಗಳಿಗೆ ತುಲಾಭಾರ

ಎಸ್.ಎರ್ರಿಸ್ವಾಮಿ

ಬಳ್ಳಾರಿ, ತಾಲೂಕಿನ ಕುರೇಕುಪ್ಪ ಗ್ರಾಮದ ಶ್ರೀಜಗದ್ಗುರು ರೇಣುಕಾಚಾರ್ಯ ಆಶ್ರಮದಲ್ಲಿ ಹಮ್ಮಿಕೊಂಡಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪುರಾಣ ಪ್ರವಚನ ಹಾಗೂ ಶರಣ ಸಿದ್ದಯ್ಯತಾತನವರ 16ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಉರವಕೊಂಡ ಗವಿಮಠದ ಉತ್ತರಾಧಿಕಾರಿ ಶ್ರೀಕರಿಬಸವರಾಜೇಂದ್ರಸ್ವಾಮಿಗಳಿಗೆ ತುಲಾಭಾರ ಬುಧವಾರ ನೆರವೇರಿಸಲಾಯಿತು.

ಎಮ್ಮಿಗನೂರು ಹಂಪಿಸಾವಿರ ದೇವರ ಮಠದ ಶ್ರೀವಾಮದೇವ ಶಿವಾಚಾರ್ಯ ಸ್ವಾಮಿ ಹಾಗೂ ವೆಂಕಟಾಪುರ ಪರತತ್ವಾನಂದ ಅವಧೂತರು ಸಾನ್ನಿಧ್ಯ ವಹಿಸಿದ್ದರು. ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಉಡೇದ ಬಸವರಾಜ, ಲೆಕ್ಕ ಪರಿಶೋಧಕ ಸಿದ್ಧರಾಮೇಶ್ವರಗೌಡ, ವಕೀಲ ನರೇಂದ್ರ ಬಾಬು, ನಿವೃತ್ತ ಶಿಕ್ಷಕ ಆರ್.ಭೋಗನಗೌಡ ಅವರಿಗೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಾ. 12ರವರೆಗೆ ಪುರಾಣ ಪ್ರವಚನ ನಡೆಯಲಿದ್ದು, 12ರಂದು ಜಗದ್ಗುರು ರೇಣುಕಾಚಾರ್ಯರಿಗೆ ರುದ್ರಾಭಿಷೇಕ, ಹೋಮ-ಹವನ ಹಾಗೂ ಬೆಳಗ್ಗೆ 10 ಗಂಟೆಗೆ ಮಡಿತೇರು ಜರುಗಲಿದೆ.