ಜಿಲ್ಲೆ

ಮೊಬೈಲ್​ ಹುಡುಕಿಸಿ ಕೊಡುವಂತೆ ಸಿಎಂಗೆ ಪತ್ರ ಬರೆದ ಮೈಸೂರಿನವ!

arunakunigal

ಮೈಸೂರು: ಇಲ್ಲೊಬ್ಬ ಭೂಪ ನನ್ನ ಮೊಬೈಲ್​ ಕಳೆದು ಹೋಗಿದೆ. ಹುಡುಕಿಸಿ ಕೊಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಜನತಾ ಬಡಾವಣೆಯ ನಿವಾಸಿ ಶಿವಣ್ಣ ಪತ್ರ ಬರೆದವರು.

ಆ.25ರಂದು ಬೆಳಗ್ಗೆ 10.30ರ ಸಮಯದಲ್ಲಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಉಡ್ ಲ್ಯಾಂಡ್ಸ್ ಚಿತ್ರಮಂದಿರದತ್ತ ನಾನು ನಡೆದುಕೊಂಡು ಹೋಗುತ್ತಿದೆ. ಈ ವೇಳೆ ಕಳ್ಳರು ನನ್ನ ಮೊಬೈಲ್​ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಮೊಬೈಲ್ ಹುಡುಕಿಕೊಡುವಂತೆ ಲಷ್ಕರ್ ಠಾಣೆಯಲ್ಲಿ ದೂರು ನೀಡಿದ್ದೆ. ಇನ್ನೂ ಮೊಬೈಲ್ ಹುಡುಕಿಕೊಟ್ಟಿಲ್ಲ. ಪ್ಲೀಸ್​ ನೀವಾದ್ರೂ ನನ್ನ ಮೊಬೈಲ್​ ಸಿಗುವಂತೆ ಸಹಕರಿಸಿ ಎಂದು ಸಿಎಂಗೆ ಶಿವಣ್ಣ ಪತ್ರ ಬರೆದಿದ್ದಾರೆ.