ಚಿಕ್ಕೋಡಿ: ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅವುಗಳನ್ನು ಬೆಳೆಸಲು ಶ್ರಮಿಸಬೇಕು ಎಂದು ಕೆಎಲ್ಇ ನಿರ್ದೇಶಕ ಬಸವರಾಜ ಪಾಟೀಲ ಹೇಳಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಬಿ.ಕೆ.ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಹಾಕಿ ಮತ್ತು ಬಾಕ್ಸಿಂಗ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಾಕಷ್ಟು ಅನುದಾನ ಮತ್ತು ಸೂಕ್ತ ತರಬೇತಿ ನೀಡುವ ಮೂಲಕ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಸಾಧನೆಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ವಿಶ್ರಾಂತ ಪ್ರಾಚಾರ್ಯ ಡಾ.ಎಂ.ಟಿ.ಕುರಣಿ ಮಾತನಾಡಿ, ವಿದ್ಯಾರ್ಥಿಗಳ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಅವಶ್ಯಕವಾಗಿದೆ ಎಂದು ತಿಳಿಸಿದರು.
ಪದವಿಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ ಮಾತನಾಡಿ, ಸ್ಪರ್ಧೆಗಳಲ್ಲಿ ಸೋಲು&ಗೆಲುವು ಸಹಜ. ವಿನಮ್ರತೆಯಿಂದ ಎರಡನ್ನು ಸ್ವೀಕರಿಸಿ ಕ್ರೀಡಾ ಸ್ಪೂರ್ತಿ ಮೆರೆಯಬೇಕೆಂದರು.
ಪದವಿ ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ, ಉಪ ಪ್ರಾಚಾರ್ಯ ಸುಧೀರ ಕೋಟಿವಾಲೆ, ಕ್ರೀಡಾ ಪರಿವೀಕ್ಷಕ ಎಸ್.ಎಸ್.ಸನದಿ, ಜಿಲ್ಲಾ ಕ್ರೀಡಾ ಸಂಯೋಜಕ ಅಜಯ ಮಾನೆ, ತಾಲೂಕು ಕ್ರೀಡಾ ಸಂಯೋಜಕ ವೈ.ಮಾಚಕನೂರ, ದೈಹಿಕ ಶಿಕ್ಷಣ ನಿರ್ದೇಶಕ ಪ್ರವಿಣ ವಾಮೋರೆ, ಉಪನ್ಯಾಸಕರಾದ ವಿಶಾಲ ಕೋಲೆ, ಪಿ.ಬಿ.ಪಾಟೀಲ, ಮಲ್ಲಿಕಾರ್ಜುನ ಜರಳಿ, ಸಿದ್ದಣ್ಣ ನಾಯಕ, ಸುಷ್ಮಾ ಜಮದಾಡೆ, ಪ್ರಜ್ಞಾ ಬಾಗೇವಾಡಿ, ಸುಪ್ರಿಯಾ ಪೂಜಾರಿ, ಮಹೇಶ ಮದಬಾಂವಿ, ಆರ್.ಎಸ್.ಮಿನಚೆ ಇತರರಿದ್ದರು. ಎಸ್.ಈ.ಅವರಾದಿ ಸ್ವಾಗತಿಸಿದರು. ಎಂ.ಎಂ.ಪಾಟೀಲ ನಿರೂಪಿಸಿದರು. ತಿಪ್ಪಣ್ಣ ಖೋತ ವಂದಿಸಿದರು.