ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟಿಸಲಾಯಿತು. ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮಹಾದೇವಪ್ಪ ತೇಲಿ, ರಾಮನಗೌಡ ಪಾಟೀಲ ಮತ್ತಿತರರಿದ್ದಾರೆ.  
ಜಿಲ್ಲೆ

ರೈತ ಆತ್ಮಹತ್ಯೆ ತಡೆಗೆ ಒಟ್ಟಾಗಿ ಶ್ರಮಿಸೋಣ; ಸಂಗಮೇಶ ಸಗರ

Vijyapura - Parsuram Bhasagi

ವಿಜಯಪುರ: ರೈತರ ದೇಶದ ಬೆನ್ನೆಲುಬು. ಆದರೆ, ಪ್ರಸ್ತುತ ರೈತರ ಸ್ಥಿತಿ ಶೋಚನೀಯವಾಗಿದೆ. ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಹೀಗಾಗಿ ಎಲ್ಲರೂ ಒಟ್ಟಾಗಿ ರೈತ ಆತ್ಮಹತ್ಯೆ ತಡೆಗೆ ಶ್ರಮಿಸೋಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.

ತಾಲೂಕಿನ ಹಡಗಲಿ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟಿಸಿ ಹಾಗೂ ನೂತನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.

ಈ ನಾಡಿನಲ್ಲಿ ರೈತರನ್ನು ಕೃಷಿಯಿಂದ ದೂರವಿಟ್ಟು ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆದಿದೆ. ಇದಕ್ಕೆ ನಮ್ಮ ಜನಪ್ರತಿನಿಧಿಗಳು ಸಹ ಕೈಜೋಡಿಸುತ್ತಾ, ಅಂಥವರ ಪರವಾಗಿಯೇ ಯೋಜನೆಗಳನ್ನು ರೂಪಿಸಿ ರೈತರಿಗೆ ಅನ್ಯಾಯ ಮಾಡುತ್ತಾ ದ್ರೋಹ ಎಸುಗುತ್ತಿದ್ದಾರೆ. ಆದ್ದರಿಂದ ರೈತರೆಲ್ಲರೂ ಒಗ್ಗಟಾಗಿ ಶಕ್ತಿ ಪ್ರದರ್ಶಿಸಬೇಕು. ಅಂದಾಗ ಮಾತ್ರ ಈ ದೇಶದಲ್ಲಿ ಕೃಷಿ ಉಳಿಯುವುದರ ಜೊತೆಗೆ ರೈತ ಕುಲ ಉಳಿಯುವುದು ಎಂದರು.

ಜಿಲ್ಲೆಯಲ್ಲಿ ಆಲಮಟ್ಟಿ ಅಣೆಕಟ್ಟು ಇದ್ದರೂ ನೀರಾವರಿ ಸೌಲಭ್ಯ ಸಿಗುತ್ತಿಲ್ಲ. ಸುಮಾರು 24 ಏತ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಹಣ ಖರ್ಚು ಮಾಡಿದ್ದರೂ ಸಂಪೂರ್ಣ ನೀರಾವರಿ ಆಗಿಲ್ಲ, ಜೊತೆಗೆ ಪ್ರತಿ ಬೇಸಿಗೆಯಲ್ಲಿ ಕುಡಿಯಲು ನೀರು ಸಿಗದೇ ಟ್ಯಾಂಕರ್ ನೀರು ಹಾಕಿಸಿಕೊಳ್ಳುವುದು ತಪ್ಪುತ್ತಿಲ್ಲ. ಆದ್ದರಿಂದ ಈ ರೀತಿ ಸಂಘಟನೆ ಪ್ರತಿ ಗ್ರಾಮದಲ್ಲಿ ರೈತರು, ರೈತ ಮಹಿಳೆಯರು ಹಾಗೂ ರೈತ ಕಾರ್ಮಿಕರನ್ನೊಳಗೊಂಡು ಸಂಘಟನೆಗೆ ಬರಬೇಕು. ಅಂದಾಗ ಮಾತ್ರ ರೈತ ಆತ್ಮಹತ್ಯೆ ತಡೆಯಬಹುದು ಎಂದರು.

ವಿಜಯಪುರ ತಾಲೂಕಾಧ್ಯಕ್ಷ ಮಹಾದೇವಪ್ಪ ತೇಲಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ ಮಾತನಾಡಿದರು. ಬಕ್ಕೇಶ್ವರ ದೇವಸ್ಥಾನದ ಪೀಠಾಧಿಪತಿ ಪಪೂ ಶಿವಯ್ಯ ಮಹಾಸ್ವಾಮಿಗಳು ನೂತನವಾಗಿ ಸಂಘಕ್ಕೆ ಸೇರಿದ ಎಲ್ಲ ರೈತರಿಗೆ ಹಸಿರು ಶಾಲು ಹೊದಿಸಿ, ಗುರುತಿನ ಚೀಟಿಗಳನ್ನು ಹಾಕಿ ಆಶೀರ್ವಚನ ನೀಡಿದರು.

ಪ್ರಕಾಶ ತೇಲಿ, ಶಿವಯ್ಯ ಚಟ್ಟರಕಿ, ಕಾಶಿನಾಥ ಹೂಗಾರ, ಮಳಸಿದ್ದ ಔರಾದಿ, ಅಶೋಕ ಕನ್ನೂರ, ಬಸವರಾಜ ಹಡಪದ, ಸಿದ್ದನಗೌಡ ಬಿರಾದಾರ, ಮಲಕು ಅಕ್ಕಿಹುಗ್ಗಿ, ಶರಣಬಸು ಇಂಡಿ, ಸುಖಾನಂದ ಗಂಗಶೆಟ್ಟಿ, ಶ್ರೀಕಾಂತ ಬೆಳ್ಳುಬ್ಬಿ, ಈರಪ್ಪ ಅಕ್ಕಿಹುಗ್ಗಿ, ಪರಸು ಚಿಕ್ಕಲಕಿ, ರೇವಣಸಿದ್ದ ಹಾದಿಮನಿ, ರುದ್ರಯ್ಯ ಸ್ಥಾವರಮಠ, ಮಲ್ಲಿಕಾರ್ಜುನ ಬಳವಲದ, ಸಿದ್ದು ಗಂಗಶೆಟ್ಟಿ, ಸಂಗಮೇಶ ಪತ್ತಾರ, ಶರಣಬಸ್ಸು ಗಂಗಶೆಟ್ಟಿ, ಶ್ರೀಶೈಲ ಕಾಳಗಿ, ಬಸವರಾಜ ಹಜೇರಿ, ಸಂತೋಷ ಹಂಚನಾಳ, ರಾಮ ಪಡಗಾನೂರ, ಯಲ್ಲಪ್ಪ ಕರಬಂಟನಾಳ, ಮಲ್ಲು ಬಿರಾದಾರ, ಸಿದ್ದಯ್ಯ ಮಠಪತಿ, ಭೀಮನಗೌಡ ಬಿರಾದಾರ ಮತ್ತಿತರರಿದ್ದರು.