ಜಿಲ್ಲೆ

ಒಮ್ಮನಸ್ಸಿನಿಂದ ಕನ್ನಡ ಬೆಳೆಸುವ ಕಾರ್ಯವಾಗಲಿ

ಬಸವರಾಜ ವೀರಪ್ಪ ಗರಗ

ಕುಮಟಾ: ಕರ್ನಾಟಕ ರಾಜ್ಯ ಉದಯವಾಗಲು ಸಾಹಿತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರಣ ಎಂದು ನಿವೃತ್ತ ಮುಖ್ಯಶಿಕ್ಷಕ ಎಂ.ಟಿ. ಗೌಡ ಹೇಳಿದರು.

ಇಲ್ಲಿನ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಶಿಕ್ಷಕ ವಿಜಯಕುಮಾರ ನಾಯ್ಕ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ, ಆದರೆ, ಇಂದು ತನ್ನ ಹಳೆಯ ಸೊಗಡನ್ನು ಕಳೆದುಕೊಂಡಿದೆ ಎಂದರು.

ಚುಟುಕು ಕವಿ ಬೀರಣ್ಣ ನಾಯಕ, ಎಲ್ಲರೂ ಸೇರಿ ಒಮ್ಮನಸ್ಸಿನಿಂದ ಕನ್ನಡ ಭಾಷೆ ಬೆಳೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಪೊ›. ಪ್ರಮೋದ ನಾಯ್ಕ ಮಾತನಾಡಿ, ಕನ್ನಡ, ಕನ್ನಡಿಗ, ಕರ್ನಾಟಕದ ಮೂಲ ಸೆಲೆಯೇ ಕನ್ನಡ ಸಾಹಿತ್ಯ ಪರಿಷತ್, ಪ್ರತಿ ಹಂತದಲ್ಲೂ ಕನ್ನಡದ ಅಸ್ಮಿತೆಗಾಗಿ ಹೋರಾಟ ಮಾಡುತ್ತದೆ ಎಂದರು.

ವಸಂತ ಶೇಟ್, ಸುರೇಶ್ ಭಟ್, ಮೋಹನ ನಾಯ್ಕ ಕೂಜಳ್ಳಿ, ಅರವಿಂದ ನಾಯಕ, ಸಂದೇಶ, ಶೈಲಾ ಗುನಗಿ, ಇತರರಿದ್ದರು.

ಗಣಪತಿ ಅಡಿಗುಂಡಿ, ನಾಗರಾಜ ಶೆಟ್ಟಿ ಹಾಗೂ ನಾಗರಾಜ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.