ಜಿಲ್ಲೆ

ಜಾತಿ ತಾರತಮ್ಯ ಹೋಗಲಾಡಿಸಲು ಶ್ರಮಿಸೋಣ

ಕೋಲಾರ ಡೆಸ್ಕ್

ಮುಳಬಾಗಿಲು: ಸದೃಢ ಭಾರತ ನಿಮಾರ್ಣದಲ್ಲಿ ಪ್ರಜ್ಞಾವಂತ ನಾಗರಿಕರು ಸದಾ ಕಾರ್ಯನಿರ್ವಹಿಸಬೇಕು, ಆಗಲೇ ಸುಸಂಸತ ಸಮಾಜ ನಿಮಾರ್ಣ ಸಾಧ್ಯ, ಅಸ್ಪ-----ೃಶ್ಯತೆ ನಿವಾರಣೆ, ಜಾತಿ ತಾರತಮ್ಯಗಳು ಹೋಗಲಾಡಿಸಲು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್​.ರವಿ ಕರೆ ನೀಡಿದರು.

ತಾಲೂಕಿನ ತಿಮ್ಮರಾವುತ್ತನಹಳ್ಳಿಯಲ್ಲಿ ಅರಿವು ಭಾರತ್​ ವತಿಯಿಂದ ವಾರಿದಿ ಮಂಜುನಾಥ ರೆಡ್ಡಿ ಹಾಗೂ ಜಯರಾಮ ರೆಡ್ಡಿ ಅವರ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹಭೋಜನ ಕಾರ್ಯಕ್ರಮದಲ್ಲಿ ಮಾತನಾಡಿ, ಅರಿವು ಭಾರತ್​ ವತಿಯಿಂದ "ಸಮಾನತೆಗಾಗಿ ಸಹ ಭೋಜನ ನಮ್ಮ ನಡೆ ಅಸ್ಪ-----ೃಶ್ಯತೆ ಮುಕ್ತ ಭಾರತದೆಡೆಗೆ' ಎಂಬ ವಿನೂತನ ಕಾರ್ಯಕ್ರಮ ಸಮಾಜದಲ್ಲಿ ಜಾಗೃತಿ ಕಾರ್ಯಕ್ರಮವಾಗಿದೆ ಎಂದರು.

ವಿದ್ಯಾವಂತರಲ್ಲಿ ಇರುವ ಜಾತಿಪ್ರೇಮ ಮತ್ತು ತಾರತಮ್ಯ ಅನಕ್ಷರಸ್ಥರಲ್ಲಿ ಇಲ್ಲ. ಪ್ರೀತಿ, ಸಾಮರಸ್ಯ, ವ್ಯಕ್ತಿತ್ವ ಕಟ್ಟಿ ಕೊಡಬೇಕಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಗಳ ಬಗ್ಗೆ ಮಾತನಾಡುತ್ತಿರುವುದು ದು@ಖದ ವಿಚಾರ, ಕಾನೂನುಗಳು ಜಾತಿ ತಾರತಮ್ಯ ಮಾಡುವುದನ್ನು ನಿಮೂರ್ಲನೆ ಮಾಡಲು ಪ್ರಯತ್ನಿಸಿದರೂ ವಾಸ್ತವವಾಗಿ ಹಾಗೂ ಶಾಶ್ವತವಾಗಿ ಸಮಾಜದಲ್ಲಿ ಜಾತಿಯನ್ನು ದೂರ ಮಾಡಲು ಆಗುತ್ತಿಲ್ಲ ಹೀಗಾಗಿ ಜನ ಮನೆಯ ಬಾಗಿಲುಗಳ ಜತೆಗೆ ಮನದ ಬಾಗಿಲುಗಳನ್ನು ತೆರೆಯಬೇಕಾಗಿದೆ ಎಂದರು.

ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಬಿ.ನಿಖಿಲ್​ ಮಾತನಾಡಿ, ಪ್ರತಿಯೊಬ್ಬರೂ ಜೀವನಾನುಭವವನ್ನು ಅನುಭವಿಸಲು ಎಲ್ಲರಲ್ಲೂ ಸಮಾನತೆ ಇರಬೇಕು. ಜಾತಿ ಸಮಸ್ಯೆಗಳಿಗೆ ಕಾನೂನಾತ್ಮಕ ಕ್ರಮಗಳಿದ್ದರೂ ಅದು ಶಾಶ್ವತವಲ್ಲ, ದಲಿತರು ಸವರ್ಣೀಯರ ಗೃಹ ಪ್ರವೇಶ ಮಾಡುತ್ತಿರುವ ಕೆಲಸಗಳಿಂದ ಚಿಕ್ಕ ಮಕ್ಕಳು ತಮಗೆ ತಾವೇ ಬದಲಾಗಿ ಸಮಾನತೆಯಿಂದ ಬದುಕಲು ಅವಕಾಶ ಸಿಕ್ಕಂತಾಗುತ್ತದೆ. ಹೀಗಾಗಿ ಗೃಹ ಪ್ರವೇಶ ತಂಡದ ಜತೆಗೆ ನಾನೂ ಸೈನಿಕನಂತೆ ಕೆಲಸ ಮಾಡಿ ಜಾತಿಯನ್ನು ಹೋಗಲಾಡಿಸಲು ಸಿದ್ಧರಾಗಬೇಕು ಎಂದರು.

ಜಾನಪದ ಅಕಾಡೆಮಿ ರಾಜ್ಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್​ ಮಾತನಾಡಿ, ಜಾತಿ ಎಂಬುವುದು ನಾವೇ ಕಟ್ಟಿಕೊಂಡಿರುವ ವ್ಯವಸ್ಥೆ, ಅದನ್ನು ಬಿಟ್ಟು ಪ್ರಕೃತಿ ದತ್ತವಾಗಿ ಶಕ್ತಿಯುತವಾಗಿ ನಡೆಯಬೇಕು. ಯಾವ ಸಾಧಕರೂ ಜಾತಿ ಎಂಬ ಜಗಲಿಯ ಮೇಲೆ ಕೂರಲಿಲ್ಲ, ಅಂತಹವರ ಹಾದಿಯಲ್ಲಿ ಅರಿವು ಭಾರತ್​ ಕೆಲಸ ಮಾಡುತ್ತಿದೆ ಎಂದರು.

ತಹಸೀಲ್ದಾರ್​ ವಿ.ಗೀತಾ, ಮುಖಂಡರಾದ ಟಿ.ವಿಜಯ್​ ಕುಮಾರ್​, ಪಂಡಿತ್​ ಮುನಿವೆಂಕಟಪ್ಪ, ಎಂ.ಸುಬ್ಬಾರೆಡ್ಡಿ, ವಾರಿದಿ ಮಂಜುನಾಥ ರೆಡ್ಡಿ, ಟಿ.ಎಂ.ಜಯರಾಮ ರೆಡ್ಡಿ, ಅರಿವು ಶಿವಪ್ಪ, ಮೋಹನ ರೆಡ್ಡಿ, ಮಂಜುಕನ್ನಿಕಾ, ಎಂ.ಎಸ್​.ಶ್ರೀನಿವಾಸ ರೆಡ್ಡಿ, ಅಬ್ಬಣಿ ಶಿವಪ್ಪ, ನಾರಾಯಣಪ್ಪ, ಟಿ.ಆರ್​.ಶಂಕರಪ್ಪ, ಆನಂದ್​, ನರಸಿಂಹ, ಗ್ರಾಪಂ ಅಧ್ಯಕ್ಷ ವೆಂಕಟರಾಮ್​ ಇದ್ದರು.