ಜಿಲ್ಲೆ

ಅರ್ಥ ಅರಿತು ಶಬ್ದಗಳ ಬಳಕೆ ಮಾಡಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಧರ್ಮ ಹಾಗೂ ಅಧ್ಯಾತ್ಮಕ್ಕೆ ವ್ಯತ್ಯಾಸವಿದೆ. ಅದನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯ ಎಂದು ಬೀದರ ಮಾಣಿಕಪ್ರಭು ಸಂಸ್ಥಾನದ ಶ್ರೀ ಜ್ಞಾನರಾಜ ಮಹಾರಾಜರು ಹೇಳಿದರು.
ನಗರದ ಗಾಂಧಿಚೌಕ್​ನ ಶ್ರೀಮದ್​ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಾಠಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಜನರು ತಮಗೆ ತಿಳಿದಂತೆ ಧರ್ಮ, ಅಧ್ಯಾತ್ಮ, ಆತ್ಮ ಮೊದಲಾದ ಶಬ್ದ ಬಳಸುತ್ತಾರೆ. ಶಬ್ದಗಳ ಸರಿಯಾದ ಅರ್ಥ ತಿಳಿದು ಬಳಸಿದರೆ ಹೇಳಿದ್ದು ಪರಿಣಾಮಕಾರಿಯಾಗುತ್ತದೆ. ಧರ್ಮ ಸಾಮೂಹಿಕವಾಗಿದ್ದರೆ, ಅಧ್ಯಾತ್ಮ ವೈಯಕ್ತಿಕವಾಗಿರುತ್ತದೆ. ಧರ್ಮವನ್ನು ಕಂಡುಹಿಡಿಯಲು ಸಾಧ್ಯವಾದರೆ, ಅಧ್ಯಾತ್ಮ ಕಂಡುಹಿಡಿಯಲಾಗುವುದಿಲ್ಲ. ವ್ಯಕ್ತಿ ಯಾವ ಪ್ರಮಾಣದಲ್ಲಿ ಅಧ್ಯಾತ್ಮ ಸಾಧನೆ ಮಾಡಿದ್ದಾನೆ ಎಂದು ತಿಳಿಯಲಾಗುವುದಿಲ್ಲ. ನಮ್ಮೊಳಗಿನ ನಾನು ಎಂಬ ಭಾವವೇ ಅಧ್ಯಾತ್ಮ. ಆತ್ಮದ ಜ್ಞಾನವೇ ಆಧ್ಯಾತ್ಮವಾಗಿದೆ ಎಂದರು.
ಪಂ. ವೇಣಿಮಾಧವಶಾಸ್ತ್ರಿ ರಚಿಸಿದ 2 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಡಾ. ಮಧುಸೂಧನ ಶಾಸ್ತ್ರಿ ಕೃತಿಗಳನ್ನು ಪರಿಚಯಿಸಿದರು. ಪಂ. ಚಂದ್ರಶೇಖರ ಶಾಸ್ತ್ರಿ ಪಾಠಶಾಲೆ ವರದಿ ವಾಚಿಸಿದರು. ಪಾಠಶಾಲೆ ಅಧ್ಯಕ್ಷ ರಾಜೀವ ಪಾಟೀಲ ಕುಲಕರ್ಣಿ ಸ್ವಾಗತಿಸಿದರು.