ಜಿಲ್ಲೆ

ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಅಭಿನಯ ಸ್ಕೂಲ್ ಆಫ್ ಡಾನ್ಸ್ನ ರಜತ ಮಹೋತ್ಸವ ನಿಮಿತ್ತ ಇತ್ತೀಚೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಬಲಾ ಕಲಾವಿದ ಡಾ. ನಾಗಲಿಂಗ ಮುರಗಿ ಮಾತನಾಡಿ, ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಆಗ ಮಾತ್ರ ಕಲಾಕ್ಷೇತ್ರ ಸಮೃದ್ಧಿಯಾಗಿರುವುದು ಮತ್ತು ಕಲಾವಿದರಲ್ಲಿ ಹೊಸ ಭರವಸೆ ಮೂಡಲಿದೆ. ಮುಂಬರುವ ದಿನಗಳಲ್ಲಿ ಭಾಗವಹಿಸುವ ಮಗು ಕಲಾವಿದರಾಗುವ ಸಾಧ್ಯತೆ ಹೆಚ್ಚು. ಜತೆಗೆ ಉತ್ತಮ ಕೇಳುಗರಾಗುವುದು ಖಂಡಿತ ಎಂದರು.

ವಿಭಾ ದೀಕ್ಷಿತ ಅವರ ಸಿತಾರ ವಾದನ ಗಮನ ಸೆಳೆಯಿತು. ಯುವ ಕಲಾವಿದೆ ಶಿವಾನಿ ಕವಠೇಕರ ಪ್ರಸ್ತುತ ಪಡಿಸಿದ ಛೋಟಾ ಖಯಾಲ್ ಮತ್ತು ಭಕ್ತಿ ಗೀತೆಗಳು ಪ್ರೇಕ್ಷಕರಿಗೆ ಮುದ ನೀಡಿದವು. ಚಿದಂಬರ ಜೋಶಿ ಹಾರ್ವೇನಿಯಂ ಹಾಗೂ ಡಾ. ನಾಗಲಿಂಗ ಮುರಗಿ ಸಮರ್ಥವಾಗಿ ತಬಲಾ ಸಾಥ್ ನೀಡಿದರು.

ಅಭಿನಯ ಸ್ಕೂಲ್ ಆಫ್ ಡಾನ್ಸ್ನ ವಿದುಷಿ ಸೀಮಾ ಉಪಾಧ್ಯಾಯ ಪ್ರಾಸ್ತಾವಿಕ ಮಾತನಾಡಿದರು. ಖ್ಯಾತ ಸಿತಾರ ವಾದಕ ಪಂ. ಶ್ರೀನಿವಾಸ ಜೋಶಿ, ಗಾಯಕ ಈಶ್ವರಪ್ಪ ಮಾತನಾಡಿದರು. ವಿ. ಎಲ್. ಪಾಟೀಲ, ತಬಲಾ ಕಲಾವಿದ ಡಾ.ಮನುಕುಮಾರ ಹಿರೇಮಠ, ಕೃಷ್ಣ ಬಡಿಗೇರ ಉಪಸ್ಥಿತರಿದ್ದರು. ಶ್ವೇತಾ ಶೆಣೈ ನಿರೂಪಿಸಿದರು.

.