ಜಿಲ್ಲೆ

ಅಭಿವೃದ್ಧಿ ಕುರಿತು ರ್ಚಚಿಸೋಣ

ಮರಿದೇವ ಹೂಗಾರ

ಹುಬ್ಬಳ್ಳಿ: ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಯಾವ್ಯಾವು ಎಂಬುದರ ಕುರಿತು ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್, ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿವಾದ ಮಾಡುವುದು ಬಿಟ್ಟು ಬೇರೆ ಏನೂ ಮಾತನಾಡಲ್ಲ. ಪ್ರಗತಿ ಬಗ್ಗೆ ಮಾತನಾಡುವುದಿಲ್ಲ. ಡಾಲರ್ ಬಗ್ಗೆ ಮಾತನಾಡಲ್ಲ. ಮಣಿಪುರ ಬಗ್ಗೆಯೂ ಮಾತನಾಡಲ್ಲ. ಅವರಿಗೆ ಬರೀ ವಿವಾದಾತ್ಮಕ ವಿಷಯ ಬೇಕು ಎಂದು ಕುಟುಕಿದರು.

ಅಭಿವೃದ್ಧಿ ಕೆಲಸಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ, ಬೇಕಾದರೆ ಬನ್ನಿ. ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಎರಡು ತಿಂಗಳಾಗಿದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು. ಬಸವರಾಜ ರಾಯರಡ್ಡಿ ಅವರು ಸಭೆ ಕರೆಯಲು ತಿಳಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಅವರು ಮಾತನಾಡಿಲ್ಲ. ಕೇವಲ ಸಾಮಾನ್ಯ ವರ್ಗಾವಣೆ ಆಗಿದೆ. ಖಜಾನೆಯಲ್ಲಿ ಹಣ ಇಲ್ಲದೇ ಇದ್ದರೂ ಬಿಜೆಪಿಯವರು ಟೆಂಡರ್ ಕರೆದಿದ್ದರು ಎಂದು ತಿರುಗೇಟು ನೀಡಿದರು.

ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಇದು ಹೈಕಮಾಂಡ್​ಗೆ ಗೊತ್ತು. ಪೆನ್​ಡ್ರೖೆವ್ ಹೊರಗೆ ಬಂದರೆ ತಾನೇ ಕ್ರಮ ಕೈಗೊಳ್ಳುವುದು ಎಂದರು.