ಜಿಲ್ಲೆ

ದೇಶಿ ಕ್ರೀಡೆ ಬೆಳೆಸಲು ಮುಂದಾಗಲಿ

ವಿದ್ಯಾ ಶೆಟ್ಟನಗೌಡ್ರ

ನಾಗನೂರು: ಕ್ರೀಡಾಪಟುಗಳು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದಾಗ ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಜರುಗುತ್ತಿರುವ ರಾಜ್ಯ ಹಾಗೂ ವಿಭಾಗಮಟ್ಟದ ೧೪-೧೭ ವಯೋಮಾನದ ಬಾಲಕ ಬಾಲಕಿಯರ ಖೋ ಖೋ ಪಂದ್ಯಾವಳಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿ, ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು ಎಂದರು.

ಬಳಿಕ ಸಚಿವ ಸತೀಶ ಜಾರಕಿಹೊಳಿ ಅವರನ್ನು ಪ್ರಭಾ ಶುಗರ್ ನಿರ್ದೇಶಕ ಕೆಂಚನಗೌಡ ಪಾಟೀಲ ಹಾಗೂ ಖೋ ಖೋ ಅಸೋಶಿಯೇಷನ್ ಜಿಲ್ಲಾಧ್ಯಕ್ಷ ಗಜಾನನ ಯರಗಣವಿ ಸತ್ಕರಿಸಿದರು.

ರಾಜ್ಯಮಟ್ಟಕ್ಕೆ ಆಯ್ಕೆ: ೧೪ ವರ್ಷದ ಒಳಗಿನ ಬಾಲಕ-ಬಾಲಕಿಯರ ವಿಭಾಗಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಬಾಲಕರ ಚಿಕ್ಕೋಡಿ ತಂಡ ಬೆಳಗಾವಿ ತಂಡವನ್ನು ೧೦-೫ ಅಂಕದಿಂದ ಮಣಿಸಿ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ವಿಜಯಪುರ ತಂಡ ಬಾಗಲಕೋಟೆ ತಂಡವನ್ನು ೭ ಅಂಕಗಳಿಂದ ಮಣಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡವು.

೧೭ ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಿಕ್ಕೋಡಿ ತಂಡ ಧಾರವಾಡ ತಂಡವನ್ನು ೧೪-೧೩ ಅಂಕದೊಂದಿಗೆ ಸೋಲಿಸಿ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿ ತಂಡ ಹಾವೇರಿ ತಂಡವನ್ನು ೧೦-೯ ಅಂಕಗಳಿಂದ ಮಣಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು.

ಬಾಗಲಕೋಟೆ ಡಿಡಿಪಿಐ ಎ.ಸಿ.ಮನ್ನಿಕೇರಿ, ಬಸನಗೌಡ ಪಾಟೀಲ, ಹಳ್ಯಾಳದ ಶಿವಲಿಂಗೇಶ್ವರ ಸ್ವಾಮೀಜಿ, ಪರಸಪ್ಪ ಬಬಲಿ, ಮಲ್ಲಪ್ಪ ಹೊಸಮನಿ, ಸುರೇಶ ಸಕ್ಕರೆಪ್ಪಗೋಳ, ಜುನೇದಿ ಪಟೇಲ, ಎಸ್.ಬಿ.ಹಳಿಗೌಡರ, ಎಲ್.ಕೆ.ತೋರಣಗಟ್ಟಿ, ರಾಜು ಹಿರೇಮಠ, ಎಸ್.ಎಲ್.ಹೊಸಮನಿ, ಎಸ್.ಬಿ.ಹೊಸಮನಿ, ಬಿ.ಬಿ.ಪಾಟೀಲ, ಎಲ್.ಬಿ.ಸಕ್ರೆಪ್ಪಗೋಳ, ಬಿ.ಎಂ.ಬಂಡಿ, ಸಿ.ಎ.ಸಕ್ರೆಪ್ಪಗೋಳ, ಎಸ್.ಬಿ.ಕೇದಾರಿ, ಈರಣ್ಣ ಹಳಿಗೌಡರ, ಸಿ.ಆರ್.ಪೂಜಾರಿ ಇತರರು ಇದ್ದರು.