ಜಿಲ್ಲೆ

ಲೋಪವಾಗದಂತೆ ನೋಡಿಕೊಳ್ಳಲಿ

ಪ್ರಶಾಂತ ಹೂಗಾರ

ಅಥಣಿ ಗ್ರಾಮೀಣ: ಮುಂಗಾರು ಬಿತ್ತನೆಗೆ ರೈತರು ಸಜ್ಜಾಗಿದ್ದು, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬೀಜ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಸಿಬ್ಬಂದಿ ನೋಡಿಕೊಳ್ಳಬೇಕು ಎಂದು ಅನಂತಪುರ ಕೃಷಿ ಅಧಿಕಾರಿ ರವಿಕುಮಾರ ಬಂಗಾರಿ ಹೇಳಿದರು.

ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಮೆಕ್ಕೆಜೋಳ, ಉದ್ದು, ತೊಗರಿ, ಹೆಸರು ಸೇರಿ ಹಲವು ಬಿತ್ತನೆ ಬೀಜಗಳು ದಾಸ್ತಾನು ಇವೆ. ರೈತರ ಅನುಕೂಲಕ್ಕೆ ತಕ್ಕಂತೆ ಬೀಜ ವಿತರಿಸಲಾಗುವುದು ಎಂದು ತಿಳಿಸಿದರು.

ಮಂಜುನಾಥ ಗುಂಜಿಗಾಂವಿ, ಲಕ್ಷ್ಮಣ ತಳವಾರ, ಅರ್ಜುನ ಕೆಂವರೆಡ್ಡಿ, ಸುನೀತಾ ಮಾಳಿ, ಮಲ್ಲಪ್ಪ ದನಗರ, ಮಲ್ಲೇಶ ಪಡಸಲಗಿ, ಶ್ರೀಶೈಲ ಮಾಳಿ, ಪ್ರಮೋದ ಯಾದವಾಡ, ಬಸವರಾಜ ಅಥಣಿ, ಕುಶಾಲ ಬೇವನೂರ, ಯಲ್ಲಪ್ಪ ಕೋಳಿ ಇತರರಿದ್ದರು.