ಜಿಲ್ಲೆ

ಅವಕಾಶ ಉಪಯೋಗಿಸಿಕೊಳ್ಳಲಿ

ಕುಡಚಿ: ಪೂರ್ವಜನ್ಮದ ಪುಣ್ಯದಿಂದ ಮಾತ್ರ ಮನುಷ್ಯ ಸುಖಿ ಜೀವನ ನಡೆಸಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಪುಣ್ಯ ಕಾರ್ಯಗಳಲ್ಲಿ ಹೆಚ್ಚಿನ ಒಲವು ತೋರಬೇಕು ಎಂದು ಅಭಿನವ ಕಲ್ಮೇಶ್ವರ ಸ್ವಾಮೀಜಿ ಹೇಳಿದರು.

ಹಾಲಶಿರಗೂರ ಗ್ರಾಮದಲ್ಲಿ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ವೇದಾಂತ ಪ್ರವಚನ ಕಾರ್ಯಕ್ರಮದ ಸಮಾರೂಪ ಸಮಾರಂಭದಲ್ಲಿ ಮಾತನಾಡಿ, ಮಹಾತ್ಮರ, ಶರಣರ ಹಿತವಚನಗಳನ್ನು ಆಲಿಸಬೇಕು. ಧಾನ, ಧರ್ಮದ ಕಾರ್ಯದಿಂದ ಪುಣ್ಯ ಸಂಪಾದಿಸಿಕೊಳ್ಳಬೇಕು. ದೊರೆತ ಅವಕಾಶವನ್ನು ಒಳ್ಳೆ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಡೊಳ್ಳಿನ ಪದಗಳು, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಅಭಿನವ ಕಲ್ಮೇಶ್ವರ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಸಿದ್ಧಾರೂಢ ಶರಣರು, ಕಾಡಯ್ಯ ಸ್ವಾಮೀಜಿ ಇತರರಿದ್ದರು.