ಸನಾಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎಲ್‌ಕೆಜಿ ಮತ್ತು ಯುಕೆಜಿ ನೂತನ ಕೊಠಡಿಗಳನ್ನು ಎಸ್‌ಡಿಎಂಸಿ ಅಧ್ಯಕ್ಷ ಯಮನಪ್ಪ ತೇಲಿ ಉದ್ಘಾಟಿಸಿದರು. ಸತ್ಯವ್ವ ನಾಟಿಕಾರ, ಸಿ.ಎಸ್. ಕಲ್ಯಾಣಿ, ರಮೇಶ ಅವಟಿ, ಅಶೋಕ ಹಳೇಮನಿ ಮತ್ತಿತರರಿದ್ದಾರೆ. 
ಜಿಲ್ಲೆ

ಸರ್ಕಾರಿ ಶಾಲೆ ಉಳಿಸಲು ಮುಂದಾಗೋಣ

ವಿನಯ ಆಶೋಕ ನಾಯ್ಕ

ಜಮಖಂಡಿ : ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡುವ ಮೂಲಕ ಶಾಲೆ ಉಳಿಸಲು ಮುಂದಾಗಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಯಮನಪ್ಪ ತೇಲಿ ಹೇಳಿದರು.

ತಾಲೂಕಿನ ಸನಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎಲ್‌ಕೆಜಿ ಮತ್ತು ಯುಕೆಜಿ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ ಗೋಡೆಗಳನ್ನು ವರ್ಣರಂಜಿತ ಚಿತ್ರಗಳ ಮೂಲಕ ಅಲಂಕರಿಸಲಾಗಿದ್ದು, ಮಕ್ಕಳು ಆಕರ್ಷಿತರಾಗುವಂತೆ ಮಾಡಿದೆ. ಕಲಿಕೆಯ ಜತೆಗೆ ಮಕ್ಕಳಸ್ನೇಹಿ ವಾತವರಣಕ್ಕೂ ಆದ್ಯತೆ ನೀಡಲಾಗಿದೆ ಎಂದರು.

ಬಿಇಒ ಎ.ಕೆ. ಬಸನ್ನವರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸತ್ಯವ್ವ ನಾಟಿಕಾರ, ಬಿಸಿಯೂಟ ಅಧಿಕಾರಿ ಸಿ.ಎಸ್. ಕಲ್ಯಾಣಿ, ಬಿಆರ್‌ಪಿ ರಮೇಶ ಅವಟಿ, ಸಿಆರ್‌ಪಿ ಅಶೋಕ ಹಳೇಮನಿ, ಶಿಕ್ಷಕ ಬಸವರಾಜ ಅರವತ್ತಿ, ಸವಿತಾ ಮಾಂಗ, ಸಿದ್ದಪ್ಪ ನರಸನ್ನವರ, ಈರಣ್ಣ ಪೈಗೋನ್, ಎ.ಎನ್. ವಕ್ರಾನಿ, ಎಸ್.ಬಿ. ದೇಸಾಯಿ, ಬೇಬಿ ಆಯಿಶಾ ಮುಜಾವರ, ದೀಪಾ ಜಮಖಂಡಿ, ಸಂಪೀತಾ ಬೀಳಗಿ, ನಾಟಿಕಾರ ಮತ್ತಿತರರಿದ್ದರು.

ಮುಖ್ಯ ಶಿಕ್ಷಕ ಜಿ.ಎಂ. ಮರನೂರ ಸ್ವಾಗತಿಸಿದರು. ಶಿಕ್ಷಕ ಎಸ್.ಸಿ. ಜಾಧವ ನಿರೂಪಿಸಿದರು.