ವಿಜಯಪುರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ದೀಪದಾನ ಸಮಾರಂಭದಲ್ಲಿ ಪ್ರಾಚಾರ್ಯ ಡಾ. ಎಸ್​.ಟಿ. ಬೋಳರೆಡ್ಡಿ ಮಾತನಾಡಿದರು. ಕವಿತಾ ಹಿರೇಮಠ, ಸಚಿನಕುಮಾರ ಪಾಟೀಲ ಮತ್ತಿತರರಿದ್ದಾರೆ. 
ಜಿಲ್ಲೆ

ಹೊಸ ಭಾರತ ನಿರ್ಮಿಸಲು ಶ್ರಮಿಸೋಣ

ಗಿರೀಶ ಸಗರ

ವಿಜಯಪುರ: ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ರಾಜ್ಯ ಮಹಿಳಾ ವಿವಿಯ ಪ್ರಾಧ್ಯಾಪಕ ಡಾ. ಉದಯಕುಮಾರ ಕುಲಕರ್ಣಿ ಹೇಳಿದರು.

ನಗರದ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೊನೆಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದೀಪದಾನ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಸಮಾಜ ನಿಮಿಸಲು ಶ್ರಮಿಸುತ್ತಿರುವ ಶಿಕ್ಷಕರ ಜೊತೆಗೆ ನಾವೆಲ್ಲ ಕೈ ಜೋಡಿಸುವ ಮೂಲಕ ಹೊಸ ಭಾರತ ನಿರ್ಮಿಸುವ ಪ್ರತಿಜ್ಞೆ ಮಾಡೋಣ ದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್​.ಟಿ. ಬೋಳರೆಡ್ಡಿ ಮಾತನಾಡಿ, ಇಂದಿನ ಪ್ರಶಿಕ್ಷಣಾರ್ಥಿಗಳು ಮುಂದಿನ ಭವಿಷ್ಯ ಭಾರತದ ಉತ್ತಮ ಶಿಕ್ಷಕರು ಎಂದು ತಿಳಿಸಿದರು.

ಸಂಗೀತ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರವಿಣ ಡೋಣೂರ ಸ್ವಾಗತಿಸಿ ಪರಿಚಯಿಸಿದರು. ಡಾ. ಎಸ್​.ಡಿ. ಮನಮಿ ನಿರೂಪಿಸದರು. ಅಧಿಕ ಅಂಕಗಳಿಸಿದ ಐಶ್ವರ್ಯ ಎಂ.ಎಲ್​., ಅವರಿಗೆ ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕ ವಿಜಯಕುಮಾರ ಸಜ್ಜನ ಮತ್ತು ಪ್ರಶಿಕ್ಷಣಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಪ್ರಶಿಕ್ಷಣಾರ್ಥಿಗಳಿಂದ ರಚಿಸಿದ ಶಿಕಾರಿ ಎಂಬ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಕಾರ್ಯಾಧ್ಯಕ್ಷೆ ಕವಿತಾ ಹಿರೇಮಠ, ಕಾರ್ಯದರ್ಶಿ ಸಚಿನಕುಮಾರ ಪಾಟೀಲ, ವಿಜಯಕುಮಾರ್​ ಸಜ್ಜನ, ಸುಜಾತ ಗೋರಿನಾಳ, ಕವಿತಾ ಹಿರೇಮಠ, ವಾಣಿಶ್ರೀ ಇರಬಾಶೆಟ್ಟಿ, ವಿನುತಾ ಚೌಧರಿ, ಪ್ರದಿಪ ರೆಡ್ಡಿ, ರಿಯಾಜ್​ ಫರೀದ್​, ಶೋಭಾ ನಾವಿ, ಆಕಾಶ ವಾಲಿಕಾರ, ಸುರೇಖಾ ಗಿಣ್ಣಿ ಮತ್ತಿತರರಿದ್ದರು