ಜಿಲ್ಲೆ

ದೇಶದ ಅಭಿವೃದ್ಧಿಗೆ ಶ್ರಮಿಸೋಣ

ಸೋಮಲಿಂಗ ತಳವಾರ

ಇಟಗಿ: ಇಲ್ಲಿನ ಜನತಾ ಶಿಣ ಪ್ರಸಾರ ಸಮಿತಿಯ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮತ್ತು ಬಿಎಂ ಸಾಣಿಕೊಪ್ಪ ಪದವಿ ಕಾಲೇಜುಗಳ ಸಹಯೋಗದಲ್ಲಿ ಭಾನುವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆ ಚೇರ್ಮನ್​ ವಿ.ಬಿ. ಸಾಣಿಕೊಪ್ಪ ಮಾತನಾಡಿ, ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಗಳು ನಡೆದುಕೊಂಡು ದೇಶದ ಅಭಿವದ್ಧಿಗೆ ಶ್ರಮಿಸಬೇಕು ಎಂದು ವಿದ್ಯಾಥಿಗಳಿಗೆ ಕರೆ ನೀಡಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ರೂಪಕಗಳು, ಬ್ಯಾಂಡ್​ ಹಾಗೂ ಲೇಜೀಂ, ದೇಶಭಕ್ತಿ ಗೀತೆಗಳ ಪಥಸಂಚಲನ ಜರುಗಿತು. ಸಂಸ್ಥೆಯ ಕಾರ್ಯದರ್ಶಿ ಶ್ರೀಶೆಲ ತುರಮರಿ, ಕೋಶಾಧಿಕಾರಿ ಮಹಾಂತೇಶ ಸಾಣಿಕೊಪ್ಪ , ನಿರ್ದೇಶಕರಾದ ಎಸ್​.ಪಿ. ಸಾಣಿಕೊಪ್ಪ, ಎಂ.ವಿ. ತುರಮರಿ, ಎಸ್​.ವಿ. ಗಣಾಚಾರಿ, ಎಸ್​.ಕೆ. ಕುರಗುಂದ, ಪ್ರಾಚಾರ್ಯರಾದ ಎಸ್​.ಎಸ್​.ಶಾಸ್ತ್ರಿ, ಆರ್​.ಬಿ.ಹುಣಶೀಕಟ್ಟಿ, ಮುಖ್ಯಶಿಕ್ಷಕ ಎಂ.ಬಿ. ಕಾಮಗೌಡ, ಹಾಗೂ ಸಿಬ್ಬಂದಿ ಇದ್ದರು. ದೆಹಿಕ ಶಿಕ ಎ.ಆರ್​.ಪಾಟೀಲ ನಿರೂಪಿಸಿದರು.