ತಲ್ಲೂರ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಹೊಸ ಚಿಂತನೆ, ವಿಚಾರ ಹಾಗೂ ಕಲಿಕೆ ರೂಢಿಸಿಕೊಳ್ಳಬೇಕು ಎಂದು ಶಿಕ ಎಲ್.ಎಸ್.ನಾಗನ್ನವರ ಹೇಳಿದರು.
ಗ್ರಾಮದ ಶ್ರೀಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮಾತನಾಡಿದರು.
ಮುಖಂಡ ಕೀರಪ್ಪ ಬಡಿಗೇರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಣದ ಜತೆಗೆ ಸಂಸತಿ, ಸಂಸ್ಕಾರ ಅಳವಡಿಸಿಕೊಂಡು ಗುರು&ಹಿರಿಯರು, ಹೆತ್ತವರು ಹಾಗೂ ಶಿಕರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಸಮಾಜ ಸೇವಕ ಮಹಾಂತೇಶ ಮರಿಗೌಡ್ರ ಶಾಲೆಗೆ ಲೋಟ, ತಟ್ಟೆ ನೀಡಿದರು. ಸಾಯಿ ಪಿಕೆಪಿಎಸ್ ಅಧ್ಯ ಮಹಾರುದ್ರಪ್ಪ ಉಪ್ಪಿನ, ನಿವೃತ್ತ ಮುಖ್ಯಶಿಕ ಎಸ್.ಆರ್.ಬೆನಕಟ್ಟಿ, ಮಲ್ಲಿಕಾರ್ಜುನ ಗಾಣಿಗೇರ, ಬಸಪ್ರಭು ಮಲಕನ್ನವರ, ಲತಾ ತಲ್ಲೂರ, ಬಿ.ಸಿ.ಕರಿಕಟ್ಟಿ, ಆರ್.ಪಿ.ದುಂಡನಕೊಪ್ಪ, ಈರಪ್ಪ ಚಿಕಾಕಿ, ಎಸ್.ಎಪ್.ಬಡಿಗೇರ, ಮಹಾಂತೇಶ ಮರಿಗೌಡರ, ಎ.ಜೆ.ಕಾಂಬಳೆ, ಜಿ.ಎ.ಕೊಟ್ರಶೆಟ್ಟಿ, ಎಸ್.ಎಂ.ಸಾಲಿ, ಎ.ಎಚ್.ಕುದರಿ, ಎನ್.ಎ.ಕತ್ತಿ, ರೆಹಮಾನಸಾಬ್ ಮುಲ್ಲಾ ಇತರರಿದ್ದರು.