ಬೈಲೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು. ಮಹಾಂತೇಶ ಇಟಗಿ, ಎಸ್.ಎನ್.ಹುಬ್ಬಳ್ಳಿ, ನಾಗೇಶ ಬೆಣ್ಣಿ, ಮಂಜುನಾಥ ಮರೆಪ್ಪಗೋಳ, ವಿವೇಕ ಕುರಗುಂದ ಇತರರಿದ್ದರು. 
ಜಿಲ್ಲೆ

ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

ಶಂಕರ ಗೆಜ್ಜಿ

ಇಟಗಿ: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಪ್ರಯತ್ನ ದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಿಕ್ಷಕ ವಿವೇಕ ಕುರಗುಂದ ಹೇಳಿದರು.

ಸಮೀಪದ ಬೈಲೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ ಇಟಗಿ ಮಾತನಾಡಿ, ಗ್ರಾಮದ ಪ್ರಮುಖರು, ಶಿಕ್ಷಣ ಇಲಾಖೆ ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ಶತಮಾನೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಗವುದು ಎಂದರು. ಸಿಆರ್‌ಪಿ ಎಸ್.ಎನ್.ಹುಬ್ಬಳ್ಳಿ, ನಾಗೇಶ ಬೆಣ್ಣಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಂಜುನಾಥ ಮರೆಪ್ಪಗೋಳ, ಅಣ್ಣಪ್ಪ ಕಪೋಲಿ, ಈರಪ್ಪ ಶಿಂಧೋಳ್ಳಿ, ಆನಂದ ಬೆಣ್ಣಿ, ಮುಖ್ಯಶಿಕ್ಷಕ ಎನ್.ಕೆ.ಮಲಮೇತ್ರಿ, ಪಕೀರಪ್ಪ ಬೆಳಗಾವಿ, ಸಂಜೀವ ನಂದಿಹಳ್ಳಿ, ಅಶೋಕ ಹುಬ್ಬಳ್ಳಿ, ಜಿ.ಎನ್.ಹಿರೇಮಠ, ಆರ್.ಎಸ್.ಬಲ್ಮಿ, ಕೆ.ತಿಪ್ಪೇಸ್ವಾಮಿ, ವಿ.ರಂಗನಾಥ ಇತರರಿದ್ದರು.