ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡ ಸೇವಾ ಟ್ರಸ್ಟ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಸಿದ್ದೇಶ್, ನರಸಿಂಹ, ಅನಿಜಿತ್, ಪ್ರಕಾಶ್, ಶಿವಪ್ರಕಾಶ್, ಸಂತೋಷ್, ರಮೇಶ್ ಇದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಪರಿಸರ ಉಳಿಸಲು ಮುಂದಾಗಲಿ

ನಾಗೇಶ ಎಸ್

ಮದ್ದೂರು: ಪರಿಸರವನ್ನು ಉಳಿಸಿದರೆ ಮಾತ್ರ ನಮ್ಮ ಮುಂದಿನ ತಲೆಮಾರು ಆರೋಗ್ಯಕರ ಹಾಗೂ ನೆಮ್ಮದಿಯಾಗಿ ಬದುಕಲು ಸಾಧ್ಯ. ಆದ್ದರಿಂದ, ಪ್ರತಿಯೊಬ್ಬರೂ ಪರಿಸರ ಉಳಿಸಲು ಮುಂದಾಗಬೇಕೆಂದು ಕೆಂಪೇಗೌಡ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿದ್ದೇಶ್ ಮನವಿ ಮಾಡಿದರು.

ತಾಲೂಕಿನ ನಗರಕೆರೆ ಗ್ರಾಮದ ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ಪರಿಸರವಿಲ್ಲದಿದ್ದರೆ ಯಾರೂ ಕೂಡ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಇದನ್ನರಿತು ಪ್ರತಿಯೊಬ್ಬರೂ ಒಂದೊಂದು ಸಸಿ ನೆಡುವ ಮೂಲಕ ಪರಿಸರ ಉಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಯುವ ಜನಾಂಗ ಪರಿಸರ ಉಳಿವಿನ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಕಟ್ಟಡ ವ್ಯಕ್ತಿಗಳಿಗೆ ಸಹಾಯ ಮಾಡುವ ಮೂಲಕ ಅವರ ಬಾಳಿಗೆ ಆಸರೆಯಾಗಬೇಕು ಎಂದು ಸಲಹೆ ನೀಡಿದರು.

ಸೇವಾ ಟ್ರಸ್ಟ್ ಗೌರವಾಧ್ಯಕ್ಷ ನರಸಿಂಹ, ಅಧ್ಯಕ್ಷ ಸಿದ್ದೇಶ್, ಉಪಾಧ್ಯಕ್ಷ ಅನಿಜಿತ್, ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಶಿವಪ್ರಕಾಶ್, ಸಹ ಕಾರ್ಯದರ್ಶಿ ಸಂತೋಷ್, ಮುಖಂಡರಾದ ರಮೇಶ್, ಕುಮಾರ್, ಸುಖೇಶ್, ವಿಕಾಶ್, ಶರತ್ ಸೇರಿದಂತೆ ಇತರರು ಹಾಜರಿದ್ದರು.