ಆಲಮೇಲ ತಾಲೂಕಿನ ಗುಂದಗಿ ಗ್ರಾಮದಲ್ಲಿ ಆಸ್ಮಾಕಂ ಸಂಸತಂ ಕಾರ್ಯಕ್ರಮದಲ್ಲಿ ರಾಜಕುಮಾರ ಕರಜಗಿ ಮಾತನಾಡಿದರು. ಸುಜಾತಾ ಜಾಲಗೇರಿ, ಈರಪ್ಪ ಕಾಂಬಳೆ, ಶಿವಾನಂದ ಬಿರಾದಾರ ಇತರರಿದ್ದರು. 
ಜಿಲ್ಲೆ

ಸಂಸತ ಭಾಷೆ ಉಳಿಸಿ, ಬೆಳೆಸೋಣ

ಗಿರೀಶ ಸಗರ

ಆಲಮೇಲ: ಪ್ರಪಂಚದ ಎಲ್ಲ ಭಾಷೆಗಳ ತಾಯಿ ಸಂಸತ ಭಾಷೆಯಾಗಿದೆ. ಇದು ದೇವಾನುದೇವತೆಗಳ ಭಾಷೆಯಾಗಿದು, ಖುಷಿ&ಮುನಿಗಳ ಮೂಲಕ ಜನರು ಕಲಿತಿದ್ದಾರೆ. ಅದನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಗುಂದಗಿಯ ಸ್ವಾಮಿ ವಿವೇಕಾನಂದ ಸಂಸತ ಪಾಠ ಶಾಲೆಯ ಅಧ್ಯ ರಾಜಕುಮಾರ ಕರಜಗಿ ಹೇಳಿದರು.

ತಾಲೂಕಿನ ಗುಂದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಸಂಸತ ಪಾಠ ಶಾಲೆ ಸಹಯೋಗದಲ್ಲಿ ಸಂಸತ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಸಂಸತ ನಿರ್ದೇಶನಾಲಯದಿಂದ ಶನಿವಾರ ಆಯೋಜಿಸಿದ್ದ "ಆಸ್ಮಾಕಂ ಸಂಸತಂ' ಕಾರ್ಯಕ್ರಮದ ಅಧ್ಯತೆ ವಹಿಸಿ ಅವರು ಮಾತನಾಡಿದರು.

ಸಂಸತ ಕೇವಲ ಒಂದು ಭಾಷೆ ಮಾತ್ರವಲ್ಲ. ಸನಾತನ ಪರಂಪರೆಯ ಹಲವಾರು ಚಿಂತನೆಗಳು ಇದರಲ್ಲಿ ಅಡಗಿವೆ. ಇಂಥ ಕಾರ್ಯಕ್ರಮಗಳು ಮಕ್ಕಳು ಸಂಸತ ಕಲಿಯುವಂತೆ ಪ್ರೇರೇಪಿಸಲು ಸಹಕಾರಿಯಾಗಿವೆ ಎಂದರು.

ಮುಖ್ಯಶಿಕ್ಷಕಿ ಸುಜಾತಾ ಜಾಲಗೇರಿ ಮಾತನಾಡಿ, ಸಂಸತ ಭಾಷಾ ಕಲಿಕೆಯಿಂದ ಜ್ಞಾನಾರ್ಜನೆ ವದ್ಧಿಸುತ್ತದೆ ಎಂದರು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗುರುಗಳಾದ ಈರಪ್ಪ ಕಾಂಬಳೆ, ಶಿವಾನಂದ ಬಿರಾದಾರ, ಎಂ.ಎನ್​.ಪಾಟೀಲ, ಬಸವರಾಜ ಕರಜಗಿ, ಸುಭಾಸ ಜಾಲಗೇರಿ, ನೀಲಮ್ಮ ಕರಜಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಸಂಸತ ಪಾಠ ಶಾಲೆಯ ಮಕ್ಕಳು, ಶಿಕರು ಉಪಸ್ಥಿತರಿದ್ದರು.