ಅಕ್ಕಿಆಲೂರ: ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಜವಾಬ್ದಾರಿ ಮಹತ್ವದಾಗಿರುತ್ತದೆ ಎಂದು ಹಾವೇರಿ ಜಿಪಂ ಸಿಇಒ ರುಚಿ ಬಿಂದಲ್ ಹೇಳಿದರು.
ಸಮೀಪದ ಬಾಳಂಬೀಡ ಗ್ರಾಪಂಗೆ ಮಂಗಳವಾರ ಭೇಟಿ ನೀಡಿ ವಿವಿಧ ದಾಖಲೆಗಳ ಪರಿಶೀಲಿಸಿ ಮಾತನಾಡಿದರು. ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ರಾಜ್ಯ ಹಾಗೂ ದೇಶದ ಸಮಗ್ರ ಅಭಿವೃದ್ಧಿ ಗ್ರಾಪಂಗಳ ಆಡಳಿತದ ಮೇಲೆ ಅವಲಂಬಿತವಾಗಿದೆ. ಸ್ವಚ್ಛತೆ ನಮ್ಮ ಮೊದಲ ಆದ್ಯತೆ ಆಗಬೇಕು. ತ್ಯಾಜ್ಯ ವಿಲೇವಾರಿಗೆ ಸಾರ್ವಜನಿಕರು ಗ್ರಾಪಂನೊಂದಿಗೆ ಸಹಕರಿಸಬೇಕು. ಉದ್ಯೋಗ ಖಾತ್ರಿ, 15ನೇ ಹಣಕಾಸು ಯೋಜನೆಗಳು ಗ್ರಾಮಗಳ ಶ್ರೇಯೋಭಿವೃದ್ಧಿಗೆ ಪೂಕರವಾಗಿದ್ದು, ಅವುಗಳನ್ನು ಪಾರದರ್ಶಕವಾಗಿ ಬಳಕೆ ಮಾಡಿಕೊಳ್ಳವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜನಸಾಮಾನ್ಯರ ಬೇಡಿಕೆಗಳಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಶೀಘ್ರ ಸ್ಪಂದನೆ ಅಗತ್ಯವಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ನಾಗರಾಜ ಪಾಟೀಲ ಮಾತನಾಡಿ, ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಸುವ ಆಡಳಿತ ಮಾದರಿಯಾಗುತ್ತದೆ ಎಂದರು.
ಪಿಡಿಒ ಜೆ.ಎಸ್. ಕನ್ನಕ್ಕನವರ ಮಾತನಾಡಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಜನರ ಜೀವನಮಟ್ಟ ಸುಧಾರಿಸುವ ಅನೇಕ ಯೋಜನೆಗಳಿದ್ದು, ಜನ ಸದುಪಯೋಗ ಪಡೆಯಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಅಂಬಿಗೇರ, ಸದಸ್ಯರಾದ ರವಿ ಲಕ್ಮಾಪುರ, ದೇವರಾಜ ಹರಿಜನ, ಸತೀಶ ದುಂಡಣ್ಣನವರ, ಬಸವರಾಜ ಕೆಲವರಕೊಪ್ಪ, ಪ್ರೇಮವ್ವ ದೇವಸೂರ, ಸಕ್ಕುಬಾಯಿ ತೆಪ್ಪದ, ಹೊನ್ನಮ್ಮ ಶೇತಸನದಿ, ರೇಣುಕಾ ನೀರಲಗಿ, ಭರಮನಗೌಡ ನಂದಿಹಳ್ಳಿ, ಸಫಿಯಾಬಿ ಉಪ್ಪಣಸಿ, ಮಂಜುನಾಥ ಅಗಡಿ, ಫಕೀರವ್ವ ಹರಿಜನ, ಸಿಬ್ಬಂದಿ ರಮೇಶ ಪುಟಾಣಿಕರ, ಮಾಲತೇಶ ಬಾರ್ಕಿ, ಪರಶುರಾಮ ನಂದಿಹಳ್ಳಿ, ಮಾಲತೇಶ ಶೇತಸನದಿ ಉಪಸ್ಥಿತರಿದ್ದರು.