ಜಿಲ್ಲೆ

ದೇಶದ ಕಾನೂನು ಗೌರವಿಸೋಣ

ಸಂಕೇಶ್ವರ: ದೇಶದ ಪ್ರತಿಯೊಬ್ಬ ನಾಗರಿಕ ಪರಿಪಾಲಿಸುವ ಗ್ರಂಥ ಸಂವಿಧಾನವಾಗಿದ್ದು, ದೇಶದ ಕಾನೂನು ಗೌರವಿಸಿದರೆ ಅಂಬೇಡ್ಕರ್​ರಿಗೆ ನಿಜವಾದ ನಮನ ಸಲ್ಲಿಸಿದಂತಾಗುತ್ತದೆ ಎಂದು ಹಿರಾಶುಗರ್​ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್​.ಸಿ. ಕಮತೆ ಹೇಳಿದರು.

ಸಮೀಪದ ನಿಡಸೋಸಿ ಹಿರಾಶುಗರ್​ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಬಾಬಾಸಾಹೇಬ್​ ಅಂಬೇಡ್ಕರ್​ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎನ್​ಎಸ್​ಎಸ್​ ಟಕದ ಮುಖ್ಯಸ್ಥ ಪ್ರೊ.ಎಸ್​.ಎಸ್​. ಪಾಟೀಲ, ಪ್ರೊ.ಮಹೇಶ ಹಿಪ್ಪರಗಿ, ಶಿವಾನಂದ ಸಾರವಾಡಿ ಇತರರಿದ್ದರು.