ಶಕ್ತಿ ಸಾಗರ ಸಂಗಮ ಸಮಾರಂಭದ ಪೂರ್ವ ಸಿದ್ಧತೆಯನ್ನು ಸಂಸದ ಬಿ.ವೈ.ರಾಘವೇಂದ್ರ ವೀಕ್ಷಿಸಿದರು. ಹರತಾಳು ಹಾಲಪ್ಪ, ಮೇಘರಾಜ್, ರಾಜಶೇಖರ್, ರಾಜನಂದಿನಿ ಇತರರಿದ್ದರು. 
ಜಿಲ್ಲೆ

ಪಕ್ಷಾತೀತವಾಗಿ ಬಿಎಸ್‌ವೈನ್ನು ಗೌರವಿಸೋಣ: ಬಿ.ವೈ.ರಾಘವೇಂದ್ರ

Shivamogga - Desk - Megha MS

ಸಾಗರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನುಡಿದಂತೆ ನಡೆದಿದ್ದಾರೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಹೇಳುವುದು ಕೇವಲ ಭಾಷಣಕ್ಕೆ ಸೀಮಿತವಾದುದ್ದಲ್ಲ. ಅದೇ ರೀತಿ ನಡೆದುಕೊಂಡಿದ್ದಾರೆ. ಅಂತಹವರನ್ನು ಸಾಗರದಂತಹ ಊರಿನಲ್ಲಿ ಹಿಂದುಳಿದ ಪಂಗಡಗಳ ಸಂಘಟನೆಯಿಂದ ಅಭಿಮಾನದಿಂದ ಸನ್ಮಾನಿಸುತ್ತಿರುವುದು ಅದನ್ನು ಕಣ್ತುಂಬಿಕೊಳ್ಳುವುದು ಅವರ ಮಗನಾಗಿ ನನ್ನ ಪುಣ್ಯ ಎಂದು ಭಾವಿಸಿರುವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸೋಮವಾರ ಶಕ್ತಿ ಸಾಗರ ಸಂಗಮ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಗಮನಿಸಿ ಮಾತನಾಡಿ, ಇಲ್ಲಿ ಯಾವುದೇ ರಾಜಕೀಯ ಬಣ್ಣ ಇಲ್ಲದೆ ಪಕ್ಷಾತೀತವಾಗಿ ಬಿಎಸ್‌ವೈ ಅವರ ರಾಜಕೀಯ ಹೆಜ್ಜೆಯನ್ನು ಸ್ಮರಿಸಿ ಗೌರವಿಸುವುದು ಮತ್ತು ಪೀಠಾಧಿಪತಿಗಳಿಂದ ಆಶೀರ್ವದಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಜಿಪಂ ಮಾಜಿ ಸದಸ್ಯ ರಾಜಶೇಖರ್ ಗಾಳಿಪುರ, ಡಾ. ರಾಜನಂದಿನಿ ಕಾಗೋಡು, ದೇವೇಂದ್ರಪ್ಪ ಯಲಕುಂದ್ಲಿ, ಪ್ರಶಾಂತ ಕೆ.ಜಿ.ಶಿವಪ್ಪ, ಸವಿತಾ ನಟರಾಜ್, ಸುಮಾ ಗಣೇಶ್ ಪ್ರಸಾದ್ ಇತರರಿದ್ದರು.