ಕಾಗವಾಡ: ಇಂದಿನ ಒತ್ತಡದ ಜೀವನದಲ್ಲಿ ಜನರಿಗೆ ಮಾನಸಿಕ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಎಂದು ಸಾಂಗಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಜಿಲ್ಲಾ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಜಿ.ಜಿ. ಕಾಂಬಳೆ ಹೇಳಿದರು.
ಮಹಾರಾಷ್ಟ್ರದ ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆ, ಮತ್ತು ವ್ಯಸನಮುಕ್ತಿ ಕೇಂದ್ರದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಗಿಗಳ ಕಾನೂನು ಹಕ್ಕುಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಡಾ.ಶೀತಲ ಶಿಂಧೆ, ಮನೋರೋಗ ತಜ್ಞ ಡಾ. ಮಾಣಿಕರಾವ ಸೂರ್ಯವಂಶಿ ಉಪಸ್ಥಿತರಿದ್ದು, ಮಾರ್ಗದರ್ಶನ ಮಾಡಿದರು. ಡಾ. ದೀಪಕ ಮುಕಾದಮ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ಮಲ ಆಸ್ಪತ್ರೆಯ ಸಿಬ್ಬಂದಿ ವ್ಯಸನಗಳು ಮತ್ತು ಮಾನಸಿಕ ಕಾಯಿಲೆಗಳ ಕುರಿತು ಜನಜಾಗೃತಿ ನಾಟಕ ಪ್ರದರ್ಶನ ಮಾಡಿದರು. ನಿರ್ಮಲ ಆಸ್ಪತ್ರೆಯ ಸಿಬ್ಬಂದಿ, ರೆಡ-ಶಿರಾಳದ ಮಾತೋಶ್ರೀ ಹೀರಾಯಿ ದೇಶಮುಖ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ದೀಪಕ ಮುಕಾದಮ ನಿರೂಪಣೆ ಮಾಡಿದರು.