ಬಂಗಾರಪೇಟೆ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಈ ಕೂಡಲೇ ನಿಲ್ಲಿಸಬೇಕು. ಹಿಂದು ಶ್ರದ್ಧಾ ಕೇಂದ್ರಗಳ ಮೇಲೆ ಪಿತೂರಿ ನಡೆಸುತ್ತಿರುವವರ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಕೋಲಾರ ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.
ತಾಲೂಕಿನ ಬೂದಿಕೋಟೆ ರಸ್ತೆಯಲ್ಲಿರುವ ಮಾಗೋಂದಿ ಗೇಟ್ ಬಳಿಯ ಶ್ರೀಶನೈಶ್ವರ ದೇವಸ್ಥಾನದಲ್ಲಿ ಕೊನೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿ, ಹಿಂದು ದೇವಸ್ಥಾನಗಳ ವಿರುದ್ಧ ಮಾತನಾಡುವವರಿಗೆ ಬುದ್ಧಿ
ಕಲಿಸಬೇಕು ಎಂದರು.
ತಪ್ಪು ಕಲ್ಪನೆಯ ಕಥೆಗಳನ್ನು ಹುಟ್ಟುಹಾಕಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ಶವಗಳನ್ನು ಹೂತಿಟ್ಟಿರುವುದಾಗಿ ತಿಳಿಸಿರುವ ಮುಸುಕುಧಾರಿ ಬಗ್ಗೆ ಎಸ್ಐಟಿ ಮೊದಲು ತನಿಖೆ ನಡೆಸಿ ಅವನು ಹೇಳುತ್ತಿರುವುದರ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಕಾರ್ಯಾಚರಣೆಗೆ ಇಳಿಯಬೇಕಾಗಿತ್ತು ಎಂದರು.
ಸ್ವಾತಂತ್ರ ಹೋರಾಟ ಸಮಯದಲ್ಲಿ ಹಿಂದುಗಳು ಒಗ್ಗಟ್ಟಾಗಿ ಸಂಟನೆ ಬೆಳೆಯಲು ಗಣೇಶ ಹಬ್ಬ ಆಚರಿಸುತ್ತಿದ್ದರು. ಈಗ ಗಲ್ಲಿ&ಗಲ್ಲಿಗಳಲ್ಲಿ ಗಣೇಶ ಇಟ್ಟು ಹಬ್ಬ ಆಚರಿಸಿ ಒಗ್ಗಟ್ಟಿನೊಂದಿಗೆ ದೇಶ ರಣೆಗೆ ಮುಂದಾಗಬೇಕೆಂದು ತಿಳಿಸಿದರು. 40 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ 120 ಕೋಟಿ ಹಿಂದುಗಳಿದ್ದಾರೆ. ನಮ್ಮ ಮಕ್ಕಳಿಗೆ ದೇಶದ ಇತಿಹಾಸ ಮತ್ತು ಸಾಂಸತಿಕ ಬಗ್ಗೆ ಹೇಳಿಕೊಟ್ಟು ದೇಶ ರಣೆಗೆ ಸಿದ್ಧಪಡಿಸಬೇಕಾಗಿದೆ. ದೇಶದಲ್ಲಿ ಹುಟ್ಟಿದವರೆಲ್ಲ ಭಾರತಾಂಬೆಯ ಮಕ್ಕಳಾಗಿದ್ದಾರೆ. ನಮ್ಮಲ್ಲಿ ಯಾವುದೇ ಭೇದವಿಲ್ಲದೆ ಒಕ್ಕೊರಲಿನಿಂದ ದೇಶದ್ರೋಹ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.
ದೇವಸ್ಥಾನದಲ್ಲಿ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾತ್ರಿ ಶನಿ ಪ್ರಭಾವ ನಾಟಕ ಆಯೋಜಿಸಲಾಗಿತ್ತು. ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಶ್ರೀಮುನೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಶನೈಶ್ಚರ ದೇವಸ್ಥಾನದ ಟ್ರಸ್ಟ್ ಅಧ್ಯ ಎಂ.ಮಂಜುನಾಥ್, ಮುಖಂಡರಾದ ಹೊಸರಾಯಪ್ಪ, ಕಪಾಲಿ ಶಂಕರ್, ಕದಿರೇನಹಳ್ಳಿ ಚನ್ನಕೇಶವ, ಕಾರಹಳ್ಳಿ ನಾರಾಯಣಸ್ವಾಮಿ, ಮಾಗೊಂದಿ ಹೇಮಂತ್ ರೆಡ್ಡಿ, ಬೋವಿನಗರ ನಾರಾಯಣಸ್ವಾಮಿ ಇತರರು ಇದ್ದರು.