ಅಥಣಿ: ತಾಲೂಕಿನ ಜನರಿಗೆ ಶುದ್ಧ ವಾತಾವರಣ ಒದಗಿಸಲು ಹಸಿರೀಕರಣ ಕಾರ್ಯ ಮಾಡಲಾಗುತ್ತಿದ್ದು, ಪುರಸಭೆ ಸದಸ್ಯ ಸಂತೋಷ ಸಾವಡಕರ ಸ್ವಂತ ಖರ್ಚಿನಿಂದ 1400 ಸಸಿಗಳನ್ನು ಹಲ್ಯಾಳ ವತ್ತದಿಂದ ನೀರಿನ ಟ್ಯಾಂಕ್‌ವರೆಗೆ ನೆಡುತ್ತಿರುವುದು ಎಲ್ಲರಿಗೂ ಮಾದರಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಶಂಕರನಗರ ವಾರ್ಡ್ ನಂ.3ರ ಹಲ್ಯಾಳ ರಸ್ತೆಯಿಂದ ಯಲ್ಲಮ್ಮಗುಡಿಯವರೆಗೆ ಸಸಿನೆಡುವ ಕಾರ್ಯಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿ, ಉಸಿರಾಡಲು ಶುದ್ಧ ಗಾಳಿ ಬೇಕು. ಪರಿಸರ ಸಂರಕ್ಷಣೆಯಲ್ಲಿ ತೊಡಗಿದರೆ ಮಾತ್ರ ಭವಿಷ್ಯ ಸುಂದರವಾಗಿರಲು ಸಾಧ್ಯ ಎಂದರು.
ಪುರಸಭೆ ಸದಸ್ಯ ಸಂತೋಷ ಸಾವಡಕರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಚಿಕ್ಕೋಡಿ ವೈದ್ಯಾಧಿಕಾರಿ ಶರಣಪ್ಪ ಗಡಾದ, ಡಾ.ಬಸಗೌಡ ಕಾಗೆ, ಎಸ್.ಕೆ.ಬುಟಾಳೆ, ಗಿರಿಮಲ್ಲಪ್ಪ ಉಪ್ಪಾರ, ಅಶೋಕ ಗುಡಿಮನಿ, ವಿನೋದ ಸಾವಡಕರ, ವಿಷ್ಣು ಮಾಳಿ, ಅರ್ಜುನ ನಾಯಿಕವಾಡಿ, ನರಸು ಬಡಕಂಬಿ, ಪುರಸಭಾ ಸದಸ್ಯರು ಇತರರಿದ್ದರು.