ಮಾನ್ವಿ ಪ್ರವಾಸಿ ಮಂದಿರದಲ್ಲಿ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಶಾಸಕ ಹಂಪಯ್ಯನಾಯಕ ಕಿಟ್‌ಗಳನ್ನು ವಿತರಿಸಿದರು.ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಮಲ್ಲಪ್ಪ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ರುದ್ರಪ್ಪನಾಯಕ, ಯಂಕಣ್ಣ ಪೋತ್ನಾಳ, ಪರಶುರಾಮ್ ಬಾಗಲವಾಡ, ರಾಮಣ್ಣ, ಇನ್ನಿತರರಿದ್ದರು. 
ಜಿಲ್ಲೆ

ಆರೋಗ್ಯದ ಕಡೆ ಗಮನ ಹರಿಸಲಿ

ರುದ್ರಪ್ಪ ವಾಲಿ

ಮಾನ್ವಿ: ಕಾರ್ಮಿಕರು ಸರ್ಕಾರ ನೀಡುವ ಪ್ರತಿಯೊಂದು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಹಂಪಯ್ಯನಾಯಕ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ಕಾರ್ಮಿಕರು ಕೆಲಸದ ಜತೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಸರ್ಕಾರ ಕಾರ್ಮಿಕರಿಗೆ ನಿವೇಶನ ನೀಡಬೇಕೆಂದು ಕಾರ್ಮಿಕರು ಮನವಿ ಮಾಡಿಕೊಂಡಿದ್ದು , ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.