ಬೆಳಗಾವಿ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಯುವಕರಲ್ಲಿ ಕೌಶಲದ ಕೊರತೆ ಕಾರಣವಾಗಿದೆ. ಪಠ್ಯ ಪುಸ್ತಕ ಅಭ್ಯಾಸದ ಜತೆಗೆ ವಿವಿಧ ರೀತಿ ಕೌಶಲಗಳ ಪರಿಣಿತಿ ಪಡೆಯುವುದು ಮುಖ್ಯವಾಗಿದೆ ಎಂದು ನೆಹರು ಯುವ ಕೇಂದ್ರದ ಉಪನಿರ್ದೇಶಕ ಲೋಕೇಶ ಕುಮಾರ ಹೇಳಿದರು.
ನಗರದ ಭತರೇಶ ಶಿಕ್ಷಣ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಯುವ ಮತ್ತು ಕ್ರೀಡಾ ಸಚಿವಾಲಯದ ನನ್ನ ಯುವ ಭಾರತ ಕೇಂದ್ರ, ನೆಹರು ಯುವ ಕೇಂದ್ರ ಹಾಗೂ ಭರತೇಶ ವಾಣಿಜ್ಯ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಕೌಶಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ನೀತಾ ಗಂಗರೆಡ್ಡಿ ಮಾತನಾಡಿದರು. ಮಲ್ಲಯ್ಯ ಕರಡಿ, ಯಲ್ಲಪ್ಪ ಧಬಾಲಿ ಇತರರಿದ್ದರು.