ಜಿಲ್ಲೆ

ಕೊತಬಾಳ ವಾರದ ಸಂತೆ ಸದುಪಯೋಗ ಪಡಿಸಿಕೊಳ್ಳಲಿ

ರೋಣ: ತಾಲೂಕಿನ ಕೊತಬಾಳ ಗ್ರಾಮದಲ್ಲಿ ಪ್ರತಿ ಭಾನುವಾರ ಜರುಗುವ ವಾರದ ಸಂತೆಯಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಕೃಷಿ ಉತ್ಪನ್ನಗಳ ಹಾಗೂ ತರಕಾರಿ ದಿನ ಬಳಕೆ ವಸ್ತುಗಳ ಮಾರಾಟ ಸಂತೆ ಪ್ರಾರಂಭಿಸಲಾಗಿದೆ. ಗ್ರಾಮಸ್ಥರು ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿಕರು ಸಂತೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಭಾರ ಸಹಾಯಕ ನಿರ್ದೇಶಕ ರಿಯಾಜ್ ಖತೀಬ ತಿಳಿಸಿದರು.

ಕೊತಬಾಳ ಗ್ರಾಪಂ, ಗ್ರಾಮ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಹೊಳೆಆಲೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ಕೊತಬಾಳದಲ್ಲಿ ಭಾನುವಾರ ವಾರದ ಸಂತೆ ಶುರು ಮಾಡಲಾಯಿತು. ಪಂಚಾಯಿತಿ ಅಧ್ಯಕ್ಷೆ ಭೀಮಮ್ಮ ಗುಳಗುಳಿ ಉದ್ಘಾಟಿಸಿದರು.

ಉಪಾಧ್ಯಕ್ಷ ಹನಮಂತ ಅಸೂಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸರೋಜಾ ನಲ್ಲೂರ, ಸಿದ್ದಪ್ಪ ಯಾಳಗಿ, ಶೇಖಪ್ಪ ಕೋರಿ, ಹನಮಂತ ನಾಲ್ವಾಡದ ಹಾಗೂ ಇತರರು ಉಪಸ್ಥಿತರಿದ್ದರು.

ಹೊಳೆಆಲೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಸದಸ್ಯ ಹನಮಂತ ನಾಗರಾಜ ಅವರನ್ನು ಸನ್ಮಾನಿಸಲಾಯಿತು. ಸಂತೆಯಲ್ಲಿ ದಿನಬಳಕೆ ವಸ್ತುಗಳು ಹಾಗೂ ತರಕಾರಿ ವ್ಯಾಪಾರ ವಹಿವಾಟು ಬಲು ಜೋರಾಗಿ ನಡೆಯಿತು.