ಜಿಲ್ಲೆ

ಆತ್ಮಬಲದಿಂದ ಎಲ್ಲರಂತೆ ಜೀವನ ನಡೆಸಲಿ

ವೀರೇಶ ಸೌದ್ರಿ

ಸವಣೂರ: ಅಂಗವಿಕಲರು ಸರ್ಕಾರದ ಸೌಲಭ್ಯಗಳನ್ನು ಪಡೆದು ಅರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಗ್ರಾಪಂ ಸದಸ್ಯ ನಿಂಗಪ್ಪ ಆರೇರ ಹೇಳಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಹಿರೇಮುಗದೂರ ಗ್ರಾಪಂ ಸಂಯೋಜನೆಯ ಸಂಚಾರಿ ಪುನರ್ವಸತಿ ತಜ್ಞರ ತಂಡದಿಂದ ತಾಲೂಕಿನ ಹಿರೇಮುಗದೂರ ಗ್ರಾಪಂ ಸಭಾ ಭವನದಲ್ಲಿ ಇತ್ತಿಚಿಗೆ ಏರ್ಪಡಿಸಿದ್ದ ಅಂಗವಿಕಲರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಅರಿವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆತ್ಮಬಲದಿಂದ ಎಲ್ಲರಂತೆ ಬದುಕು ನಡೆಸಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಮುಟ್ಟಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಪುನರ್ವಸತಿ ಕೇಂದ್ರವು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಶಿಬಿರ ಏರ್ಪಡಿಸಲು ಮುಂದಾಗಿದೆ ಎಂದರು.

ತಾಪಂ ಎಂಆರ್‌ಡಬ್ಲುೃ ಶಿವಪ್ಪ ಎರೇಶಿಮಿ ಮಾತನಾಡಿ, ಸರ್ಕಾರದ ಸೌಲಭ್ಯಗಳಿಂದ ಯಾರೊಬ್ಬರೂ ವಂಚಿತರಾಬಾರದು. ತಾಲೂಕಿನ ಅಂಗವಿಕಲರ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಪಂ ಸಹಕಾರ ಅವಶ್ಯಕವಾಗಿದೆ ಎಂದರು.

ಡಿಡಿಆರ್‌ಸಿ ಕಾರ್ಯವೃಂದದ ಡಾ. ಅಂಕಿತ ಆನಂದ, ಶಿವಪ್ಪ ಯರೇಶಿಮಿ, ಇರ್ಶಾದಲಿ ದುಂಡಸಿ, ಫಕೀರೇಶ ಬಾರ್ಕಿ ಹಾಗೂ ಜಗದೀಶ ಬೇಟಿಗೇರಿ ಅವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಕಾರ್ಯದರ್ಶಿ ಹನಮಂತಪ್ಪ ಸಂಗೂರ, ಗ್ರಂಥಾಲಯದ ಮೇಲ್ವಿಚಾರಕಿ ಕವಿತಾ ಸೋಮಸಾಗರ, ಮಾಲತೇಶ ಕುಲಕರ್ಣಿ, ಎಂಬಿಕೆಗಳಾದ ವೀಣಾ ಕೆಂಬಾವಿಮಠ, ವಿಜಯಲಕ್ಷ್ಮಿ ಆರೇರ, ಬಸವಣ್ಣೆಪ್ಪ ಕುರವತ್ತಿಗೌಡ್ರ, ಶ್ರೀಪಾದ ಪಾಟೀಲ, ಗುಡ್ಡಪ್ಪ ಆರೇರ, ಗಂಗಾಧರ ಬಡಿಗೇರ, ಸಣ್ಣಪ್ಪ ಹೊಸಮನಿ, ನಾಗಪ್ಪ ಬಡಿಗೇರ, ಶಿವಪ್ಪ ಅರಳಿ, ಯಲ್ಲಪ್ಪ ಕೆ., ಗುಡ್ಡಪ್ಪ ಎ., ಇತರರು ಪಾಲ್ಗೊಂಡಿದ್ದರು.