ಮಾನ್ವಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಶಿವರಾಜ ವಿ. ಸಿದ್ದೇಶ್ವರ ರಾಜಿ ಸಂಧಾನ ಮಾಡಿದ್ದರಿಂದ ಶಿವಶಂಕರ-ಸಂಧ್ಯಾ ದಂಪತಿ ಒಂದಾದರು. ಹಿರಿಯ ನ್ಯಾಯವಾದಿ ಸೆಟ್ಯಾಲ್ಲಾ ಸರ್ಲೆಟ್, ವಕೀಲರ ಸಂಘದ ಉಪಾಧ್ಯಕ್ಷ ಮನೋಹರ್ ವಿಶ್ವಕರ್ಮ, ಗುಮ್ಮ ಬಸವರಾಜ, ಕಾರ್ಯದರ್ಶಿ ಚನ್ನಬಸವ ನಾಯಕ, ಈಶಪ್ಪ ಬೈಲ್‌ಮಾರ್ಚೆಡ್, ಜೆ.ಹನುಮಂತಪ್ಪ ನೀರಮಾನ್ವಿ ಇತರರಿದ್ದರು. 
ಜಿಲ್ಲೆ

ಖುಷಿಯಿಂದ ಜೀವನ ಸಾಗಿಸಲಿ

ರುದ್ರಪ್ಪ ವಾಲಿ

ಮಾನ್ವಿ: ಸ್ಥಳೀಯ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ದಂಪತಿಗಳನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಶಿವರಾಜ ವಿ. ಸಿದ್ದೇಶ್ವರ ಅವರು ರಾಜಿ ಸಂಧಾನದ ಮೂಲಕ ದಂಪತಿಯನ್ನು ಒಂದಾಗಿಸಿ ಖುಷಿಯಿಂದ ಜೀವನ ಸಾಗಿಸುವಂತೆ ಸಲಹೆ ನೀಡಿದರು.

ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ 460 ಕ್ಕೂ ಹೆಚ್ಚು ರಾಜಿಯಾಗಬಲ್ಲ ವಿವಿಧ ಮೊಕದ್ದಮೆಗಳನ್ನು ರಾಜಿ ಸಂಧಾನದ ಮೂಲಕ ಸರಿಪಡಿಸಿ ಮಾತನಾಡಿದರು.

ಯದ್ದಲದಿನ್ನಿ ಗ್ರಾಮದ ಶಿವಶಂಕರ, ಸಂಧ್ಯಾ ದಂಪತಿವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಲೋಕ ಅದಾಲತ್‌ನಲ್ಲಿ ಇಬ್ಬರಿಗೆ ನ್ಯಾಯಾಧೀಶರು ತಿಳಿ ಹೇಳಿದ್ದಕ್ಕೆ ಪರಸ್ಪರ ಒಪ್ಪಿ ಜೀವನ ಸಾಗಿಸಲು ಮುಂದಾದರು. ಪರಸ್ಪರ ಒಪ್ಪಿ ಪುನಃ ದಾಂಪತ್ಯ ಜೀವನ ನಡೆಸುವುದಾಗಿ ರಾಜಿಯಾಗಿದ್ದರಿಂದ ನ್ಯಾಯಾಲಯದಲ್ಲಿ ಪರಸ್ಪರ ಹೂ ಮಾಲೆ ಬದಲಾಯಿಸಿಕೊಂಡರು.