ತಲ್ಲೂರ: ತಂಬಾಕು ಸೇವನೆಯಿಂದ ಸಾಮಾಜಿಕ ಮತ್ತು ದೈಹಿಕ ಸ್ವಾಸ್ಥ$್ಯ ಹಾಳಾಗುತ್ತಿದೆ. ಹೀಗಾಗಿ, ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು ಎಂದು ವೈದ್ಯಾಧಿಕಾರಿ ಡಾ.ಪ್ರಮೋದ ಸಿಂದಗಿ ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಂಬಾಕು ಸೇವನೆಯಿಂದ ಪುರುಷರಲ್ಲಿ ಸಂತಾನ ಹೀನತೆಗೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ತಂಬಾಕು ಸೇವನೆ ತ್ಯಜಿಸಿ ಆರೋಗ್ಯಯುತ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶುಶ್ರೂಷಾಧಿಕಾರಿ ವೀರೇಶ ದೇಮಶೆಟ್ಟಿ ಮಾತನಾಡಿ, ದುಶ್ಚಟಗಳಿಂದ ಮಕ್ಕಳ ಬದುಕು ಬರಡಾಗುತ್ತಿದೆ. ತಂಬಾಕು ವಿರೋಧಿ ದಿನ ಕೇವಲ ಆಚರಣೆಗಷ್ಟೇ ಸೀಮಿತವಾಗದೆ ವ್ಯಸನಮುಕ್ತರಾಗಲು ಪ್ರೇರಣೆಯಾಗಬೇಕು ಎಂದರು.
ಯಲ್ಲಪ್ಪ ಹಲಗಲಿ, ಪಾರ್ಮಸಿ ಅಧಿಕಾರಿ ಆರತಿ ಹೊಳ್ಳಿಕೇರಿ, ಎಲ್ಟಿಒ ಶಶಿಧರ ಉಪ್ಪಿನ, ವಸಂತ ಚವ್ಹಾಣ, ಗೀತಾ ಪೋಳ, ಜಿ.ಪಿ.ಹೊಂಗಲ, ಶಂಕರ ಲಮಾಣಿ, ಮಹಾವೀರ ಜೊಡಟ್ಟಿ, ರಾಜೇಶ್ವರಿ ನಾಯ್ಕರ, ಬಸವ್ವ ಕುಂಬಾರ, ನೀಲವ್ವ ಬೆನಕಟ್ಟಿ, ಶೋಭಾ ಚುಳಕಿ, ಶಾಂತವ್ವ ಜಡೆಯರ, ಮಹಾದೇವಿ ಬಾರ್ಕಿ, ಬೀಮವ್ವ ಭಜಂತ್ರಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.