????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ದೇಶದ ಪರಂಪರೆ ಪರಿಚಯಿಸೋಣ

ಚನ್ನಮ್ಮನ ಕಿತ್ತೂರು: ನಮ್ಮ ದೇಶ ಪರಂಪರೆ, ಸಂಸ್ಕಾರ ಹಾಗೂ ಸಂಪ್ರದಾಯಗಳಿಂದ ಶ್ರೀಮಂತವಾಗಿದ್ದು, ಯುವ ಪೀಳಿಗೆಗೆ ಪರಿಚಯಿಸುವಂತಹ ಜವಾಬ್ದಾರಿ ನಮ್ಮೆಲ್ಲರದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ಕೋಟೆ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಟಕದ ಸಹಯೋಗದೊಂದಿಗೆ ಭಾನುವಾರ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಗೋಳಿಹಳ್ಳಿ ಅರಣ್ಯ ವಿಭಾಗವನ್ನು ಕಿತ್ತೂರು ರಾಣಿ ಚನ್ನಮ್ಮ ಎಂದು ಮರುನಾಮಕರಣ ಮಾಡಬೇಕೆಂದು ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಕೆಆರ್​ಸಿಎಂ ಸರ್ಕಾರಿ ವಸ್ತುಸಂಗ್ರಹಾಲಯವನ್ನು ಮುಂಬರುವ ದಿನಗಳಲ್ಲಿ ನವೀಕರಿಸಿ ಮೇಲ್ದರ್ಜೆಗೇರಿಸಲಾಗುವುದು. ಕೋಟೆ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಜತೆಗೆ ಅನೇಕ ಅಭಿವದ್ಧಿ ಕಾರ್ಯಗಳೂ ಜರುಗುತ್ತಿವೆ. ವಿದ್ಯಾರ್ಥಿಗಳು ಪರಿಸರ ಸಂರಣೆ ಹಾಗೂ ಐತಿಹಾಸಿಕ ಪರಂಪರೆ ಅರಿಯುವುದು ಅಗತ್ಯ ಎಂದು ಸಲಹೆ ನೀಡಿದರು.

ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಇಂತಹ ದಿನಾಚರಣೆಗಳಿಂದ ನಮ್ಮ ಪರಂಪರೆಯ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದರು.

ಎಸ್​ಎಸ್​ಎಲ್​ಸಿ ಪರೀೆಯಲ್ಲಿ 125ಕ್ಕೆ 125 ಅಂಕ ಪಡೆದ ತಾಲೂಕಿನ 55 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ೇತ್ರ ಶಿಣಾಕಾರಿ ಸಿ.ವೈ. ತುಬಾಕದ, ಇತಿಹಾಸ ಉಪನ್ಯಾಸಕ ರಾಮಕಷ್ಣ ಇಳಕಲ್​, ಕಸಾಪ ತಾಲೂಕಾಧ್ಯ ಡಾ. ಎಸ್​.ಬಿ. ದಳವಾಯಿ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್​ ರಾವೇಂದ್ರ ಮಾತನಾಡಿದರು. ಅಷ್ಪಾಕ್​ ಹವಾಲ್ದಾರ್​, ಸುನೀಲ ಘೀವಾರಿ, ಶಿಕರಾದ ಮಹೇಶ ಚೆನ್ನಂಗಿ, ಮಹೇಶ್ವರ ಹೊಂಗಲ, ನಾಗರಾಜ ಹುಲೆಪ್ಪನವರಮಠ, ರಾಜಶೇಖರ ರಗಟಿ, ಮೆಹಬೂಬ್​ ಮುಲ್ತಾನಿ, ಎಂ.ಪಿ. ಕದಂ, ಉಮೇಶ ಹಿರೇಮಠ, ಎನ್​.ಎಂ. ನಂದಿಹಳ್ಳಿ, ಮಂಜುನಾಥ ಕಳಸಣ್ಣವರ, ಶರಣಬಸವ ವಾಲಿ, ನವ್ಯಾ ಹೊಂಗಲ ಇತರರಿದ್ದರು.