ಜಿಲ್ಲೆ

ಸೌಹಾರ್ದ, ಸದ್ಭಾವನೆ ವೃದ್ಧಿಸಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಇಟಗಿ: ಜಾತಿ, ಧರ್ಮ, ಮತ, ಭಾಷೆಗಳ ಭೇದವಿಲ್ಲದೆ ಸೌಹಾರ್ದ, ಸದ್ಭಾವನೆ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ

ಆರ್​.ಬಿ.ಹುಣಶಿಕಟ್ಟಿ ಹೇಳಿದರು. ಗ್ರಾಮದ ಜನತಾ ಶಿಣ ಪ್ರಸಾರ ಸಮಿತಿಯ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದ್ಭಾವನಾ ದಿನದ ಅಂಗವಾಗಿ ಮಾತನಾಡಿ, ಮಾಜಿ ಪ್ರಧಾನಮಂತ್ರಿ ದಿ.ರಾಜೀವ ಗಾಂಧಿ ಅವರ ಸದೃಢ ಭಾರತ ನಿರ್ಮಾಣದ ಕನಸು ಸಾಕಾರಗೊಳಿಸಲು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಬಿ.ಕಾಪೋಲಿ ಮಾತನಾಡಿದರು. ಪ್ರಾಧ್ಯಾಪಕ ಬಿ.ಎಸ್​.ಸವದಿ ಸದ್ಭಾವನಾ ದಿನದ ಪ್ರತಿಜ್ಞೆ ಬೋಧಿಸಿದರು. ಪ್ರಾಧ್ಯಾಪಕರಾದ ಎಸ್​.ಎಸ್​.ಸುಣಗಾರ, ಎ.ಎಲ್​.ಸುಣಗಾರ, ಆರ್​.ಎಸ್​.ಪಾಟೀಲ ಇತರರಿದ್ದರು.

ಕೆ.ಡಿ.ಕರ್ಕಿ ನಿರೂಪಿಸಿದರು. ಎಸ್​.ಎಸ್​.ಸುಣಗಾರ ವಂದಿಸಿದರು.