ಮೈಸೂರು: ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಫೆ.11 ರಂದು ಸಂಜೆ 4.30 ರಿಂದ 5.30 ರವರೆಗೆ ಮಕ್ಕಳಿಗಾಗಿ ‘ಕಥೆ ಕೇಳೋಣ ಬನ್ನಿ-762’ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ಕೆ.ಬಿ.ಮಾಲತಿ ಮಕ್ಕಳಿಗೆ ಕಥೆ ಹೇಳಲಿದ್ದಾರೆ.
ಸೈನ್ಸ್ ಸಂಜೆ: ಕುವೆಂಪುನಗರದ ಕಲಾ ಸುರುಚಿ ಸಂಸ್ಥೆ ಹಾಗೂ ಕುತೂಹಲಿ ಸಂಸ್ಥೆಗಳ ಆಶ್ರಯದಲ್ಲಿ ಫೆ.11 ರಂದು ಸಂಜೆ 6.30 ರಿಂದ 7.30 ರವರೆಗೆ ಸೈನ್ಸ್ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಸ್ರೋ ಸಂಸ್ಥೆಯ ವಿಜ್ಞಾನಿ ಎಂ.ವಿ.ರೂಪಾ ‘ಮಂಗಳಯಾನದ ನಿರ್ವಹಣೆಯಲ್ಲಿ ಇದ್ದ ಸವಾಲುಗಳು’ ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.
ರೂಪಾ ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಅನುಭವ ಪಡೆದಿದ್ದಾರೆ. ಚಂದ್ರಯಾನದಲ್ಲಿ ಬಳಸಲಾದ ಲ್ಯಾಂಡ್ ರೋವರ್‌ನ ಆಪರೇಷನ್ಸ್ ಡೈರೆಕ್ಟರ್ ಆಗಿಯೂ, ಮಂಗಳಯಾನದ ಯೋಜನೆಯಲ್ಲಿ ನಿರ್ವಹಣಾ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.