ಜಿಲ್ಲೆ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲಿ

ವಿದ್ಯಾ ಶೆಟ್ಟನಗೌಡ್ರ

ಹಂದಿಗುಂದ: ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಬೆಳೆಸಿ ಎಂದು ಚಿಕ್ಕೋಡಿ ಜಿಲ್ಲೆ ಪ್ರಭಾರ ಸಂಯೋಜನಾಧಿಕಾರಿ ಶಂಕರ ನಿಂಗನೂರ ಹೇಳಿದರು.

ಸಮೀಪದ ಖಣದಾಳ ಗ್ರಾಮದ ಶ್ರೀ ಹುಲಿಕಾಂತೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಾರೂಗೇರಿಯ ಡಾ.ರಾಮ ಮನೋಹರ್ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಹಾಗೂ ಶ್ರೀ ಸಿದ್ಧೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಉಪನ್ಯಾಸಕ ಟಿ.ಎಸ್.ವಂಟಗೂಡಿ ಮಾತನಾಡಿದರು. ರಾಮಕೃಷ್ಣ ದಳವಾಯಿ, ಪ್ರಾಚಾರ್ಯ ಎಸ್.ಪಿ.ಸೈದಾಪುರ, ಗ್ರಾಪಂ ಮಾಜಿ ಅಧ್ಯಕ್ಷ ರವಿ ಹಿಡಕಲ್ಲ, ಶಿವಯ್ಯ ಹಿರೇಮಠ, ಗ್ರಾಪಂ ಉಪಾಧ್ಯಕ್ಷ ರವಿ ಚಿಂಚಲಿ, ಶಿವಲಿಂಗಯ್ಯ ಹಿರೇಮಠ, ಚಿದಾನಂದ ಹಿರೇಮಠ, ಉಪನ್ಯಾಸಕಿ ಅಶ್ವಿನಿ ಕಾಂಬಳೆ, ವಿಜಯ ಕಂಬಾರ, ಎಂ.ಕೆ.ಶಿರಧೋಣಿ, ಎಸ್.ಬಿ.ಕಡಕಬಾವಿ, ಎಂ.ಬಿ.ಹೊಸಪೇಟೆ, ಆರ್.ಡಿ.ಗಸ್ತಿ, ನಿಂಗಪ್ಪ ಪೂಜೇರಿ, ಯಲ್ಲವ್ವ ಕಾಮಶೆಟ್ಟಿ, ಪ್ರಿಯಾಂಕಾ ಕುರಾಡೆ, ಲಕ್ಷ್ಮಣ ರಬಕವಿ, ಸಿದ್ದಯ್ಯ ಹಿರೇಮಠ, ನೀಲಾವತಿ ಚಿನ್ನಾಕಟ್ಟಿ ಇತರರಿದ್ದರು. ಉಪನ್ಯಾಸಕ ಎಸ್.ಎಸ್.ಜಂಗಮ ನಿರೂಪಿಸಿದರು. ಶಿಕ್ಷಕಿ ವೈ.ಎಲ್.ಕಾಮಶೆಟ್ಟಿ ಪರಿಚಯಿಸಿದರು. ಎಂ.ಬಿ.ಹೊಸಪೇಟಿ ವಂದಿಸಿದರು.