ಗೊಳಸಂಗಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ವೇಳೆ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದರು. ಬಿ.ಐ. ಚಲ್ಮಿ, ಗೋಪಾಲ ದಳವಾಯಿ, ಸಿದ್ದು ಸಾಳುಂಕೆ, ಪೂರ್ಣಿಮಾ ಕಂಬಳಶೆಟ್ಟಿ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಶಾಲೆಗಿರುವ ಕೀಳರಿಮೆ ತೊಲಗಿಸೋಣ

ಗೊಳಸಂಗಿ: ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಿಗಿರುವ ಕೀಳರಿಮೆ ಮನೋಭಾವ ತೊಲಗಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು ಸಾವಿತ್ರಿ ಎಲ್. ಕುಂದರಗಿ ಹೇಳಿದರು.

ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಣ ಎಂಬುದು ಮನೆಯೊಂದರ ತಳಹದಿ ಇದ್ದಂತೆ. ಇಲ್ಲಿ ಸದೃಢ ಕಲಿಕೆಯಾಗದಿದ್ದರೆ ಭವಿಷ್ಯದಲ್ಲಿ ಆ ಮಕ್ಕಳಿಗೆ ಸಾರ್ಥಕ ಬದುಕು ಕಟ್ಟಿಕೊಳ್ಳುವುದು ಕಷ್ಟಕರವಾಗಲಿದೆ. ಆ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಬರಿ ಸರ್ಕಾರದ ನಿರ್ದೇಶನದಂತೆ ಚಟುವಟಿಕೆ ಮಾಡಿ ಕೈ ತೊಳೆದುಕೊಂಡರೆ ಆಗದು. ಮಕ್ಕಳ ಮಾನಸಿಕ ಸ್ಥಿತಿಗತಿ ಅರಿತು ಪಾಠ ಮಾಡಿ ಕಲಿಕೆಗೆ ಉತ್ತೇಜನ ನೀಡೋಣ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವು ನೀಡಿ ಸ್ವಾಗತಿಸಿ, ಮುಂದಿನ ಕಲಿಕೆಗೆ ಶುಭ ಕೋರಿದರು. ಎಸ್‌ಡಿಎಂಸಿ ಸದಸ್ಯೆ ಪೂರ್ಣಿಮಾ ಕಂಬಳಶೆಟ್ಟಿ ಎಲ್ಲ ಮಕ್ಕಳಿಗೆ ಸಿಹಿ ವಿತರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ದಳವಾಯಿ, ಸದಸ್ಯರಾದ ಸಿದ್ದು ಸಾಳುಂಕೆ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಡಿ.ಬಿ. ಕುಪ್ಪಸ್ತ (ಡಿಬಿಕೆಜಿ), ಮುಖ್ಯಗುರು ಬಿ.ಐ. ಚಲ್ಮಿ, ಶಿಕ್ಷಕರಾದ ಎಸ್.ಎಂ. ಹಿರೇಮಠ, ಎಸ್.ಎಚ್. ದಶವಂತ, ಎನ್.ಎಂ. ತಾವರಖೇಡ, ಎಲ್.ಎ. ಗೋಕಾವಿ, ಎಚ್.ಡಿ. ನದ್ಾ, ಎಂ.ಬಿ. ಬಳಮಕರ, ಎ.ಜಿ. ಹಳಕಟ್ಟಿ ಇತರರಿದ್ದರು.