ಬರಗೂರು: ಮಹರ್ಷಿ ವಾಲ್ಮೀಕಿ ಅವರು ಮನುಕುಲಕ್ಕೆ ರಾಮಾಯಣ ರಚಿಸಿ ಸಂದೇಶವನ್ನು ಸಾರಿದ ಮಹಾತ್ಮರು. ಅವರ ಆದರ್ಶ ಸಂಸತಿಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಬರಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯ ಬಿ.ಹಲಗುಂಡೇಗೌಡ ಹೇಳಿದರು.
ಶಿರಾ ತಾಲೂಕು ಬರಗೂರಿನ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂ ಮತ್ತು ಗ್ರಾಮಸ್ಥರು ಮಂಗಳವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ವಾಲ್ಮೀಕಿ ಅವರು ರಚಿಸಿರುವ ರಾಮಾಯಣ, ಮಹಾಭಾರತ ಕೃತಿಗಳಲ್ಲಿ ಸಾಮಾಜಿಕವಾಗಿ ಹೇಗೆ ತೊಡಗಿಕೊಳ್ಳುವುದು ಎಂಬುದು ಸಂಪ್ತವಾಗಿ ರಚಿಸಿದ್ದಾರೆ ಎಂದು ತಿಳಿಸಿದರು.
ಮುಖಂಡ ಮುದ್ದು ಕೃಷ್ಣೇಗೌಡ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಆದರ್ಶ ಗುಣಗಳನ್ನು ನಾವು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗೋಣ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ನಿರ್ದೇಶಕರಾದ ಬಿ.ಸಿ.ಸತೀಶ್, ದಾನವೇಂದ್ರ, ಮದ್ದೇಗೌಡ, ಬಿ.ಸಿ.ರಾಧಾಕೃಷ್ಣ, ಫಕ್ರುದ್ದೀನ್, ಮಾರುತಿ, ಬರಗೂರು ಗ್ರಾಪಂ ಸದಸ್ಯ ಕಂಬಿ ಮಂಜುನಾಥ್, ಸುರೇಶ್, ಗೋಪಿಕುಂಟೆ ಸಿದ್ದೇಶ್, ಬಿ.ಎಲ್.ಮಂಜುನಾಥ್, ಕಿರಣ್, ರಾಜು, ಮಂಜುನಾಥ್ ಇದ್ದರು.