ಜಿಲ್ಲೆ

ಮಹನೀಯರ ತತ್ವ, ಆದರ್ಶ ಪಾಲಿಸೋಣ

ಗಾಂಧಿ ಜಯಂತಿಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಸಲಹೆ

ಮಾಲೂರು:ಭಾರತ ದೇಶಕ್ಕೆ ಶಾಂತಿ ಬೋಧಿಸಿದ ಮಹಾತ್ಮ ಗಾಂಧೀಜಿ ಹಾಗೂ ಪ್ರಧಾನಿಗಳಾಗಿ ದೇಶಕ್ಕೆ ಉತ್ತಮ ಆಡಳಿತ ನೀಡಿದ ಲಾಲ್​ ಬಹಾದೂರ್​ ಶಾಸ್ತ್ರಿ ಮಹಾನ್​ ಪುರುಷರು ಎಂದು ಶಾಸಕ ಕೆ.ವೈ.ನಂಜೇಗೌಡ ಬಣ್ಣಿಸಿದರು. ಪಟ್ಟಣದಲ್ಲಿ ಬುಧವಾರ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವ ಹಾಗೂ 10 ಕಿ.ಮೀ. ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗಾಂಧೀಜಿ ಅವರು ಜಾತಿ&ಧರ್ಮಗಳನ್ನು ಒಟ್ಟುಗೂಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡುರ. ಯಾವುದೇ ಕೋಮುಗಲಭೆಗೆ ಅವಕಾಶ ನೀಡದೆ ಶಾಂತಿಯಿಂದ ದೇಶವನ್ನು ದಾಸ್ಯಮುಕ್ತಗೊಳಿಸಿದರು. ಹಾಗಾಗಿ ಗಾಂಧಿ ಅವರ ಹಾದಿಯಲ್ಲಿಯೇ ನಾವು ಸಾಗಬೇಕು ಎಂದರು.

ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಸಾಗಿ ಕೆಂಪೇಗೌಡ ಪುತ್ಥಳಿ, ಬಸ್​ ನಿಲ್ದಾಣದ ಬಳಿಯ ಅಂಬೇಡ್ಕರ್​ ಪುತ್ಥಳಿ, ಸ್ವಾಮಿ ವಿವೇಕಾನಂದರವರ ಪುತ್ಥಳಿ, ಮಹಾರಾಜ ವೃತ್ತದಲ್ಲಿರುವ ಮಹಾರಾಜರ ಪುತ್ಥಳಿ, ಡಾ.ರಾಜಕುಮಾರ್​ ಪುತ್ಥಳಿ, ಚಲನಚಿತ್ರ ನಟರಾದ ಶಂಕರ್​ ನಾಗ್​, ವಿಷ್ಣುವರ್ಧನ್​, ಪುನೀತ್​ ರಾಜಕುಮಾರ್​ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಗಾಂಧಿ ವೃತ್ತದ ಮಹಾತ್ಮ ಗಾಂಧೀಜಿ ಪುತ್ಥಳಿ ಪುಷ್ಪನಮನ ಸಲ್ಲಿಸಿದರು.

ಮಾಲೂರು ಅಭಿವೃದ್ಧಿಗೆ 1200 ಕೋಟಿ ಅನುದಾನ: ಮಾಲೂರು ತಾಲೂಕಿನ ಅಭಿವೃದ್ಧಿಗೆ 1,200 ಕೋಟಿ ರೂ. ಅನುದಾನ ತಂದಿದ್ದು, ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಪೈಕಿ 2 ಕೋಟಿ ರೂಗಳ ವೆಚ್ಚದಲ್ಲಿ ರಂಗಮಂದಿರ ಅಭಿವೃದ್ಧಿ, 20 ಕೋಟಿ ರೂ. ವೆಚ್ಚದಲ್ಲಿ ಬಸ್​ ನಿಲ್ದಾಣ, 30 ಕೋಟಿ ರೂ. ವೆಚ್ಚದಲ್ಲಿ ಮಾಲೂರು ದೊಡ್ಡ ಕೆರೆ ಅಭಿವೃದ್ಧಿ, 42 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಪ್ರತಿಯೊಂದು ವಾರ್ಡಿಗೂ ಅಗತ್ಯ ಸೌಕರ್ಯ ಒದಗಿಸಲಾಗುವುದು. ಪ್ರತಿಯೊಂದು ವಾರ್ಡಿನ ರಸ್ತೆಗಳಿಗೂ ಡಾಂಬರೀಕರಣ ಮಾಡಲಾಗುವುದು. ಎಪಿಎಂಸಿ ಯಾರ್ಡ್​ರ್ನಿಂದ ಹೊಸೂರು ರಸ್ತೆಯವರೆಗೆ 3 ಕಿ.ಮೀ ್ಲೆ$ಓವರ್​ಅನ್ನು 350 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು, ಅರ್ಹ ಫಲಾನುಭವಿಗಳಿಗೆ ಪಂಪ್​ ಮೋಟಾರ್​ಗಳನ್ನು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರುಗಳಿಗೆ ಉಡುಗೊರೆಯಾಗಿ ಸೀರೆ ವಿತರಿಸಲಾಯಿತು.


ಗ್ರಾಮ ಪಂಚಾಯಿತಿ ಸದಸ್ಯರಾದ ಕ್ಷೇತ್ರನಹಳ್ಳಿ ವೆಂಕಟೇಶ್​ ಗೌಡ, ದರ್ಕಾ ಸಮಿತಿಯ ಸದಸ್ಯ ಬನಹಳ್ಳಿ ಸತೀಶ್​, ಪುರಸಭೆ ಸದಸ್ಯರಾದ ಬುಲೆಟ್​ ವೆಂಕಟೇಶ್​, ಮುರಳೀಧರ್​, ಇಮ್ತಿಯಾಸ್​ ಖಾನ್​, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ತಾಲೂಕು ಕಸಾಪ ಅಧ್ಯಕ್ಷ ಎಂವಿ ಹನುಮಂತಯ್ಯ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ವಿಜಯನರಸಿಂಹ, ಎಂಜಿ ಮಧುಸೂದನ್​, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಎ.ಅಶ್ವತ್ಥ ರೆಡ್ಡಿ, ಬಿಇಒ ಚಂದ್ರಕಲಾ ಇದ್ದರು.