ಉಳ್ಳಾಗಡ್ಡಿ-ಖಾನಾಪುರ: ಜನಪ್ರತಿನಿಧಿಗಳು ಅಧಿಕಾರ ಮನೋಭಾವ ಬಿಟ್ಟು ಜನಪರ ಕೆಲಸಗಳತ್ತ ಗಮನ ಹರಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಮೀಪದ ಆನಂದಪುರ ಗ್ರಾಮದಲ್ಲಿ ಶ್ರೀ ದೇವಾಂಗ ಬನಶಂಕರಿ ಮಂಗಲ ಕಾರ್ಯಾಲಯ ಶನಿವಾರ ಉದ್ಘಾಟಿಸಿ ಮಾತನಾಡಿ, ಜವಳಿ ಸಚಿವನಿದ್ದ ಅವಧಿಯಲ್ಲಿ ತಲಾ ಯೂನಿಟ್ ವಿದ್ಯುತ್‌ಗೆ ೪.೫೦ ರೂ. ಇದ್ದ ದರವನ್ನು ೧.೨೫ ರೂ.ಗೆ ಇಳಿಸಿದ್ದೇನೆ. ಪ್ರಸ್ತುತ ಇದೇ ದರ ಪ್ರಚಲಿತದಲ್ಲಿದೆ. ನೇಕಾರರ ಸಮಸ್ಯೆ ಸಲುವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನೇಕಾರರ ಕೆಲ ಸಮಸ್ಯೆಗಳಿಗೆ ಸ್ಪಂದಿಸಿದ್ದು ಸರ್ಕಾರದ ಮಟ್ಟದಲ್ಲಿ ಒತ್ತಾಯಿಸುತ್ತೇನೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹಂಪಿ ಹೇಮಕೂಟದ ದೇವಾಂಗ ಜಗದ್ಗುರು ದಯಾನಂದಪುರಿ ಸ್ವಾಮೀಜಿ ಮಾತನಾಡಿ, ನೇಕಾರರ ಸಮುದಾಯ ಚಿಕ್ಕದಾಗಿದೆ. ಸಂಕಟದಲ್ಲಿರುವ ನೇಕಾರರ ರಕ್ಷಣೆಯಾಗಬೇಕು ಎಂದರು.
ಹತ್ತರಗಿ ಕಾರಿಮಠದ ಗುರುಸಿದ್ಧ ಸ್ವಾಮೀಜಿ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವಿಂದ್ರ ಕಲಬುರ್ಗಿ, ರಾಜ್ಯ ನೇಕಾರ ಮಹಾಂಮಡಳ ಅಧ್ಯಕ್ಷ ಪರಶುರಾಮ ಡಗೆ ಮಾತನಾಡಿದರು.
ರವಿಂದ್ರ ಜಿಂಡ್ರಾಳಿ, ಸಂತೋಷ ಅತ್ತಿಮರದ, ಸುಭಾಷ ಮಲ್ಲೋಳ್ಳಿ, ಚಂದ್ರಕಾಂತ ಕಾಪಸಿ, ಅರುಣ ಅತ್ತಿಮರದ, ಸಂಕಪ್ಪ ಮುಗಳಿ, ಅರುಣ ಗಟಪಣದಿ, ಅರ್ಚನಾ ಬರ್ಕಿ, ಲೀಲಾ, ಅಭಿಜಿತ್ ಬಾವನ್ನವರ, ವಿನಾಯಕ ಶಡಶ್ಯಾಳಿ, ಪ್ರಕಾಶ ರಾವುಳ, ಗಿರೀಶ ಬಾವನ್ನವರ, ಶಶಿಕಾಂತ ಹಟ್ಟಿ, ಬಸವರಾಜ ಅತ್ತಿಮರದ ಇತರರಿದ್ದರು. ಪ್ರೊ.ಎ.ಬಿ.ನಾಯಿಕ ನಿರೂಪಿಸಿದರು. ಎಂ.ಎಸ್.ಮಲ್ಲೋಳ್ಳಿ ವಂದಿಸಿದರು.