ಮೂಡಿಗೆರೆಯಲ್ಲಿ ಬಿಜೆಪಿಯಿಂದ 100 ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಎಂ.ಕೆ.ಪ್ರಾಣೇಶ್, ರವೀಂದ್ರ, ಟಿ.ಎಂ.ಗಜೇಂದ್ರ, ನಯನ ತಳವಾರ, ಜೆ.ಎಸ್.ರಘು, ವಿ.ಕೆ.ಶಿವೇಗೌಡ, ಎಂ.ಕೆ.ಚಂದ್ರೇಶ್, ಪರೀಕ್ಷಿತ್ ಜಾವಳಿ ಇತರರಿದ್ದರು. 
ಜಿಲ್ಲೆ

ಹೆಮ್ಮೆಯಿಂದ ತಿರಂಗ ಧ್ವಜಾ ಹಾರಿಸೋಣ

ಜಿ.ಹೆಚ್. ಧನ್ಯಕುಮಾರ್

ಮೂಡಿಗೆರೆ: ರಾಷ್ಟ್ರ ಧ್ವಜ ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿದ್ದು , ಎಲ್ಲರು ತಮ್ಮ, ತಮ್ಮ ಮನೆಯಲ್ಲಿ ತಿರಂಗ ಹಾರಿಸುವ ಮೂಲಕ ಗೌರವ ಸೂಚಿಸಿ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಬಿಜೆಪಿಯಿಂದ 100 ಮೀಟರ್ ಉದ್ದದ ಧ್ವಜವನ್ನು ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ನಂತರ ಅಡ್ಯಾಯಂತಾಯರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮದು ಬೃಹತ್ ಪ್ರಜಾಪ್ರಭುತ್ವ ದೇಶವಾಗಿದೆ. ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ನೈಸರ್ಗಿಕವಾಗಿ ಸಂಪತ್ಭರಿತ ರಾಷ್ಟ್ರ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರಲು ಅನೇಕ ಮಹಾತ್ಮರು ತಮ್ಮ ಪ್ರಾಣ ತ್ಯಾಗಮಾಡಿದ್ದಾರೆ ಎಂದರು.
ಇಂದು ಬೃಹತ್ ರಾಷ್ಟ್ರಧ್ವಜವನ್ನು ಮೆರವಣಿಗೆ ನಡೆಸುವ ಮೂಲಕ ಮುಂದಿನ ಪೀಳಿಗೆ ರಾಷ್ಟ್ರಭಕ್ತಿ ಬಗ್ಗೆ ಅರಿವು ಮೂಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಎಲ್ಲ ಧರ್ಮಿಯರನ್ನು ಒಗ್ಗೂಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶವನ್ನು ಭದ್ರವಾಗಿ ಕಟ್ಟಲು ನಾವು ಪ್ರಧಾನಿ ಅವರೊಂದಿಗೆ ಕೈಜೋಡಿಸಿ ಮೂಲಕ ವಿಶ್ವದಲ್ಲೇ ನಮ್ಮ ದೇಶವನ್ನು ಶ್ರೇಷ್ಠ ಭಾರತವಾಗಿ ನಿರ್ಮಾಣ ಮಾಡಲು ಸರ್ವರೂ ಸಹಕರಿಸಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಜೆ.ಎಸ್.ರಘು, ಸರೋಜ ಸುರೇಂದ್ರ, ಎಂ.ಕೆ.ಚಂದ್ರೆಶ್, ಡಿ.ಎಸ್.ಸುರೇಂದ್ರ, ವಿ.ಕೆ.ಶಿವೆಗೌಡ, ದನಿಕ್, ಪ್ರಶಾಂತ್, ನಯನ ತಳವಾರ, ರಾಮೇಗೌಡ, ಪ್ರವೀಣ್, ಪರಿಕ್ಷಿತ್ ಜಾವಳಿ ಇದ್ದರು.